ಶಾಸಕ ರಾಮಕೃಷ್ಣಗೆ ಸಚಿವ ಸ್ಥಾನ ನೀಡಲು ಮೋಚಿ ಸಮಾಜ ಆಗ್ರಹ
ಕ.ಪ್ರ. ವಾರ್ತೆ ಲಿಂಗಸ್ಗೂರು ಮೇ 23
ಗದಗ ಜಿಲ್ಲೆಯ ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮೋಚಿ ಸಮಾಜದ ಮುಖಂಡರು ಬುಧವಾರ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಹಿಂದುಳಿದ ಮೋಚಿ ಸಮಾಜದ ರಾಮಕೃಷ್ಣ ದೊಡ್ಡಮನಿ ಅವರು ದಶಕದಿಂದ ಕಾಂಗ್ರೆಸ್ನಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಾ ಬಂದಿದ್ದು, ಸರ್ವ ಸಮಾಜದ ವಿಶ್ವಾಸಗಳಿಸಿ ಕಾರ್ಯ ಮಾಡುತ್ತಾ ಬಂದಿದ್ದಾರೆ. ಈ ಬಾರಿ ಶಾಸಕರಾಗಿ ಆಯ್ಕೆಗೊಂಡಿದ್ದು, ಮುಖ್ಯಮಂತ್ರಿಗಳು ರಾಮಕೃಷ್ಣ ದೊಡ್ಡಮನಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ರಮೇಶ ಕೊಪ್ಪಿಕರ್, ಸಿದ್ಧರಾಮಪ್ಪ ಚೆನ್ನೂರಕರ್, ಮಲ್ಲಿಕಾರ್ಜುನ ಕೆಂಭಾವಿ, ಶಿವರಾಜ ಕೆಂಭಾವಿ, ಬಿ.ಬಸ್ಸಯ್ಯ ಪ್ಯಾಟಿ, ಸುನಿಲ್, ಈರಣ್ಣ, ಶ್ರೀಮಂತ ದೇಗಲಮಡಿ, ಶಿವರಾಮ ದೇಗಲಮಡಿ, ನಾಗರಾಜ ಮುಂಡೆವಾಡಿ, ಶಾಂತಕುಮಾರ, ಕೆ. ಗುಂಡಪ್ಪ ಸೇರಿದಂತೆ ಇದ್ದರು.