ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸರ್ಕಾರಿ ನೌಕರರಿಂದ ದೂರು: ಕ್ರಮಕ್ಕೆ ಬಾದರ್ಲಿ ಮುಂದಾಗಲು ಮನವಿ

Rashmi Kasaragodu
Updated On : 24 May 2013, 11:55 am

ಸಿಂಧನೂರು: ಪತ್ರಾಂಕಿತ ಉಪಖಜಾನೆ ಅಧಿಕಾರಿ ರಾಮಪ್ಪ ಕಚೇರಿಯಲ್ಲಿ ಸಿಗುವುದೇ ಇಲ್ಲ. ಬೇಸಿಗೆಯಲ್ಲಿ 2 ಗಂಟೆಗೆ ರಾಜ್ಯ ಸರ್ಕಾರಿ ಕಚೇರಿಗಳು ಬಂದ್ ಆಗುತ್ತವೆ. ಆದರೆ ಇವರು ಪ್ರತಿನಿತ್ಯ ರಾಯಚೂರನಿಂದ ಸಿಂಧನೂರಿಗೆ ಬರುವಷ್ಟರಲ್ಲಿ ಮಧ್ಯಾಹ್ನ 1 ಗಂಟೆಯಾಗುತ್ತದೆ. ಇವರಿಗಾಗಿ ಸರ್ಕಾರಿ ನೌಕರರು ಕಾದು ಕಾದು ಬಿಸಿಲ ಬೇಗೆಗೆ ಸುಸ್ತಾಗಿ ಹೋಗಿರುತ್ತಾರೆ. ಈ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳಿಗೆ ಸರ್ಕಾರಿ ನೌಕರರು ದೂರು ಸಲ್ಲಿಸಿದರು ಕ್ರಮಕೈಗೊಂಡಿಲ್ಲ. ನೂತನ ಶಾಸಕ ಹಂಪನಗೌಡರಾದರು ರಾಮಪ್ಪನಿಗೆ ತಾಕೀತು ಮಾಡಬೇಕೆಂದು ನೌಕರರ ಸಂಘದ ಸದಸ್ಯರಾದ ರಮೇಶ, ಹನುಮಂತಪ್ಪ, ವಿಶ್ವನಾಥ ಒತ್ತಾಯಿಸಿದ್ದಾರೆ.
ಪ್ರತಿನಿತ್ಯ ಅವರು ಬರುವವರೆಗೆ ಪಿ.ಡಬ್ಯ್ಲೂಡಿ, ನೀರಾವರಿ, ತಾಲೂಕ ಪಂಚಾಯಿತಿ, ಸಿಡಿಪಿಓ ಮತ್ತಿತರ ಇಲಾಖೆಯ ನೌಕರರು ತಮ್ಮ ಬಿಲ್ಗಳಿಗೆ ಕಾಯುವುದು ಸಾಮಾನ್ಯವಾಗಿದೆ. ಇದಕ್ಕಿಂತ ಮುಖ್ಯವಾಗಿ ರಾಮಪ್ಪನ ಕೈಬೆಚ್ಚಗೆ ಮಾಡಿದರೆ ಮಾತ್ರ ಬಿಲ್ಗಳು ತ್ವರಿತಗತಿಯಲ್ಲಿ ಆಗುತ್ತವೆ. ವೃದ್ಧಾಪ್ಯ, ವಿಧವಾ, ಅಂಗವಿಕಲರ ಬಿಲ್ಗಳು ಸರಿಯಾಗಿ ಆಗುತ್ತಿಲ್ಲ. ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿ ಸರ್ಕಾರಿ ನೌಕರರಿಗೆ ಹಾಗೂ ಸಾರ್ವಜನಿಕರಿಗೆ ತಲೆನೋವಾಗಿದ್ದಾರೆ. ಜಿಲ್ಲಾ ಖಜಾನಾಧಿಕಾರಿಗಳು ಇವರೊಂದಿಗೆ ಶಾಮೀಲಾಗಿದ್ದಾರೆಂದು ನೌಕರ ವರ್ಗ ಆರೋಪಿಸಿದೆ. ಇವರ ಬಗ್ಗೆ ಶಾಸಕ ಹಂಪನಗೌಡರು ಕೂಡಲೇ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement