ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಾರಾಯಿ ಮಾರಾಟ ಮಾಡಬೇಡ ಎಂದಿದ್ದಕ್ಕೆ ಹಲ್ಲೆ

Rashmi Kasaragodu
Updated On : 24 May 2013, 11:57 am

ಕನ್ನಡಪ್ರಭ ವಾರ್ತೆ   ಗುಲ್ಬರ್ಗ   ಮೇ 23
ಶಾಲೆಯ ಹತ್ತಿರ ಸಾರಾಯಿ ಮಾರಾಟ ಮಾಡಬೇಡ ಎಂದು ಬುದ್ದಿವಾದ ಹೇಳಿದ್ದಕ್ಕೆ ವ್ಯಕ್ತಿಯೊಬ್ಬನಿಗೆ ಹಲವರು ಸೇರಿ ಹಲ್ಲೆ ನಡೆಸಿದ ಘಟನೆ ಚಲಗೇರಾ ಗ್ರಾಮದಲ್ಲಿ ನಡೆದಿದೆ.
ಭೀಮಾಶಂಕರ ಪಂಡರಿ ಎಂಬಾತನೆ ಹಲ್ಲೆಗೊಂಡವನು. ಚಲಗೇರಾ ಗ್ರಾಮದ ಶಾಲೆಯ ಹತ್ತಿರ ಸೋಮಣ್ಣ ತಂದೆ ಬಸವಂತ ಸಕ್ಕರಗಿ ಎಂಬಾತ ಸಾರಾಯಿ ಮಾರಾಟ ಮಾಡುತ್ತಿದ್ದನು. ಭೀಮಾಶಂಕರ ಪಂಡರಿ ಶಾಲೆಯ ಹತ್ತಿರ ಸಾರಾಯಿ ಮಾರಾಟ ಮಾಡಬೇಡ ಇಲ್ಲಿಯೇ ಜನರು ಕುಡಿಯುತ್ತಾರೆ. ಇದರಿಂದ ಮಕ್ಕಳ ಮತ್ತು ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಬುದ್ದಿವಾದ ಹೇಳಿದ್ದನು ಎನ್ನಲಾಗಿದೆ.
ಬುದ್ಧಿವಾದ ಹೇಳಿದ್ದಕ್ಕೆ ಕುಪಿತಗೊಂಡ ಸೋಮಣ್ಣ ಸಕ್ಕರಗಿ, ಆತನ ಹೆಂಡತಿ ಲಕ್ಷ್ಮೀಬಾಯಿ, ಮಕ್ಕಳಾದ ಶಿವಲಿಂಗಪ್ಪ, ಶ್ರೀಶೈಲ್, ಸಿದ್ದರಾಮ ಇತರರು ಸೇರಿ ಬಡಿಗೆಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಈ ಕುರಿತು ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೇಗೆಯಿಂದ ವ್ಯಕ್ತಿ ಸಾವು
ಗುಲ್ಬರ್ಗ: ಭೀಮಪುರ ಗ್ರಾಮದ ಬಳಿ ವ್ಯಕ್ತಿಯೊಬ್ಬ ಬೇಸಿಗೆ ಬಿಸಿಲಿನಿಂದ ನೀರಡಿಕೆಯಾಗಿ ಅಥವಾ ಹಸಿವೆಯಿಂದ ಬಳಲಿ ಸತ್ತಿರಬಹುದು ಎಂದು ಮಾದನ ಹಿಪ್ಪರಗಾ ಪೊಲೀಸ್ ಠಾಣೆ ಪೊಲೀಸರು ಶಂಕಿಸಿದ್ದಾರೆ.
ಕಳೆದ 21ರಂದು ಮಧ್ಯಾಹ್ನ 12ರ ಸುಮಾರಿಗೆ ಭೀಮಪುರ ಗ್ರಾಮ ಸೀಮಾಂತರದಲ್ಲಿ 50 ವರ್ಷದ ಅಪರಿಚಿತ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಈತ ಬೇಸಿಗೆ ಬಿಸಿಲಿನಿಂದ ನೀರಿಡಿಕೆಯಾಗಿ ನೀರು ಸಿಗದೆ ಇರುವುದರಿಂದ ಅಥವಾ ಹಸಿವೆಯಿಂದ ಬಳಲಿ ಸತ್ತಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement