ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅವಹೇಳನಕ್ಕೆ ಖಂಡನೆ

Lingaraj Badiger
Updated On : 25 May 2013, 11:19 am

ರಾಯಚೂರು:  ಮಂಡ್ಯದಲ್ಲಿ ಗೋಕುಲ ಪ್ರಕಾಶನ ಸಂಸ್ಥೆಯು ಆಯೋಜಿಸಿದ್ದ ಸಮಾರಂಭದಲ್ಲಿ ಎಚ್.ಎಲ್.ಕೇಶವಮೂರ್ತಿ ಅವರು ಶ್ರೀಆದಿ ಗುರುಶಂಕರಾಚಾರ್ಯರ ಬಗ್ಗೆ ಅವಹೇಳನಕಾರಿ ರೀತಿಯ ಹೇಳಿಕೆ ನೀಡಿದ್ದನ್ನು ಇಲ್ಲಿನ ಶ್ರೀ ಆದಿ ಶಂಕರ ಸೇವಾ ಸಮಿತಿ ಖಂಡಿಸಿದೆ. ಈ ಕುರಿತು ಈಚೆಗೆ ಸಭೆ ನಡೆಸಿದ ಸಮಿತಿ ಪದಾಧಿಕಾರಿಗಳು, ಶ್ರೀ ಆದಿ ಗುರುಶಂಕರಾಚಾರ್ಯರ ಬಗ್ಗೆ ಕೇಶವಮೂರ್ತಿ ಅವರು ಆಧಾರವಿಲ್ಲದೇ ಹೇಳಿಕೆ ನೀಡಿದ್ದು ಸರಿಯಲ್ಲ. ವಿಚಾರವಾದಿಗಳು ಎಂದು ಗುರುತಿಸಿಕೊಂಡವರು ಧರ್ಮ, ಧರ್ಮ ಗುರುಗಳ ಬಗ್ಗೆ ಹೇಳಿಕೆ ನೀಡುವಾಗ ಆಧಾರ ರಹಿತ ಹೇಳಿಕೆ ನೀಡುವುದು ಸರಿಯಾದ ಕ್ರಮವಲ್ಲ ಎಂದು ಸಮಿತಿ ಟೀಕಿಸಿದೆ. ಈ ಹಿನ್ನೆಲೆಯಲ್ಲಿ ಕೇಶವಮೂರ್ತಿ ಅವರು ಕೂಡಲೇ ಸಾರ್ವಜನಿಕವಾಗಿ ಅದ್ವೈತಮತ ಹಾಗೂ ಆದಿಶಂಕರಾಚಾರ್ಯರ ಕೋಟ್ಯಂತರ ಅನುಯಾಯಿಗಳ ಕ್ಷಮೆಯಾಚಿಸುವಂತೆ ಸಮಿತಿಯ ಸಭೆಯಲ್ಲಿ ಒತ್ತಾಯಿಸಿದ್ದು, ತಪ್ಪಿದಲ್ಲಿ ಹೋರಾಟಕ್ಕೆ ಸಮಿತಿ ಮುಂದಾಗಲಿದೆ ಎಂದು ಸಮಿತಿ ಎಚ್ಚರಿಸಿದೆ.
29ರಂದು ವಿಧಾನಸೌಧ ಪ್ರವೇಶ
ಲಿಂಗಸ್ಗೂರು: ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ನೇತೃತ್ವದಲ್ಲಿ ಮೇ 29ರಂದು ಸಭೆ ಸೇರಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಿ ನಂತರ ಮೆರವಣಿಗೆ ಮೂಲಕ ವಿಧಾನಸೌಧ ಪ್ರವೇಶ ಮಾಡಲಿದ್ದಾರೆಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ತಿಳಿಸಿದ್ದಾರೆ. ರಾಯಚೂರಿನಿಂದ ಮೇ 28ರಂದು ರೈಲ್ವೆಯ ಮೂಲಕ  ಬೆಂಗಳೂರಿಗೆ ರೈತರು ತೆರಳಲು ನಿರ್ಧರಿಸಲಾಗಿದ್ದು, ಕಾರಣ ತಾಲೂಕಿನ ರೈತರು ಮೇ 28ರಂದು ಸಂಜೆ ರಾಯಚೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement