ಇಂದು ಮಾರುತಿದೇವರ ಜಾತ್ರೆ
ಸಿಂಧನೂರು: ಸಿಂಧನೂರು ತಾಲೂಕಿನ ಬಳಗಾನೂರು ಗ್ರಾಮದ ಮಾರುತಿದೇವರ ಜಾತ್ರಾ ಮಹೋತ್ಸವ ನಾಳೆ ಮೇ 25ರಂದು ಅದ್ಧೂರಿಯಾಗಿ ಜರುಗಲಿದೆ. ಬೆಳಿಗ್ಗೆ ಮಾರುತಿ ದೇವರಿಗೆ ಸುಪ್ರಭಾತಸೇವೆ, ಅಭಿಷೇಕ ಪೂಜಾ ಅಲಂಕಾರ ಮತ್ತು ಬಾಬುದಾರರ ಮನೆಯಿಂದ ಮಧ್ಯಾಹ್ನ ಪೂಜಾ ಅಲಂಕಣತ ಸಾಮಗ್ರಿಗಳನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರುವುದು, ಸಂಜೆ 4 ಗಂಟೆಗೆ ರಥೋತ್ಸವ ಜರುಗಲಿದೆ ಎಂದು ದೇವಸ್ಥಾನ ಸಮಿತಿ ತಹಸೀಲ್ದಾರ ಬಿ.ಟಿ.ಕುಮಾರಸ್ವಾಮಿ ತಿಳಿಸಿದ್ದಾರೆ. 26 ರವಿವಾರದಂದು ಮುಂಜಾನೆ ಪೂಜಾ ನೈವೇದ್ಯ 1 ಗಂಟೆಗೆ ಪ್ರಸಾದ ಹಾಗೂ ಗಂಗಾಸ್ಥಳ ಅವಭೃತಸ್ನಾನ, 27 ಸೋಮವಾರದಂದು ರಾತ್ರಿ 8 ಗಂಟೆಗೆ ಉಚ್ಚಾಯ ಹಾಗೂ ಕಂಕಣ ವಿಸರ್ಜನೆ ಕಡುಬಿನ ಕಾಳಗ, ಬುಕ್ಕಿಟ್ಟಿನ ಆಟ, 29 ರಂದು ಸಾಯಂಕಾಲ ಕಳಸ ವಿಸರ್ಜನೆ ಹಾಗೂ ಭಕ್ತಾದಿಗಳಿಗೆ ಅನ್ನದಾಸೋಹ ಏರ್ಪಡಿಸಲಾಗಿದೆ.