ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ದೇವದುರ್ಗ ಸಮಗ್ರ ಅಭಿವೃದ್ಧಿಗೆ ಸಹಕರಿಸಲು ಶಾಸಕರ ಮನವಿ

Lingaraj Badiger
Updated On : 25 May 2013, 11:18 am

ದೇವದುರ್ಗ: ತಾಲೂಕಿನ ಸಮಗ್ರ ಪ್ರಗತಿಗೆ ಶ್ರಮಿಸುವುದಾಗಿ ತಿಳಿಸಿದ ಶಾಸಕ ವೆಂಕಟೇಶ ನಾಯಕ ಅವರು, ಮತದಾರರಿಗೆ ಪೊಳ್ಳು ಭರವಸೆ ನೀಡದೇ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ಹೇಳಿದರು.
ಅವರು ತಾಲೂಕಿನ ಗೋಪಾಳಪುರ, ಹೂವಿನಹೆಡ್ಗಿ, ಜೋಳದಹೆಡ್ಗಿ ಗ್ರಾಮಗಳ ಜನತೆಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭಗಳಲ್ಲಿ ಮಾತನಾಡಿ, ತಾಲೂಕಿನ ಸಮಗ್ರ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ. ಗ್ರಾಮಗಳು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳ ಬಗ್ಗೆ ತಮ್ಮ ಗಮನಕ್ಕೆ ತರಲು ಅವರು ಮನವಿ ಮಾಡಿದರು.
ಮೇ 25ರಂದು ಶಾಸಕರ ಕಚೇರಿ ಪ್ರಾರಂಭಿಸಲಾಗುತ್ತಿದ್ದು, ಗ್ರಾಮದ ಸಮಸ್ಯೆಗಳ ಬಗ್ಗೆ ದೂರುಗಳನ್ನು ಶಾಸಕರ ಕಚೇರಿಗೆ ತಲುಪಿಸಬಹುದು. ತಾಲೂಕಿನ ಅಭಿವಣದ್ಧಿಗಾಗಿ ಎಲ್ಲರೂ ಒಗ್ಗಟ್ಟಾಗಿ ಗಮನಹರಿಸೋಣ ಎಂದು ಅವರು ಮನವಿ ಮಾಡಿದರು.
ಈ ಸಂದರ್ಭ ಮಾಜಿ ಎಂಎಲ್ಸಿ ಬಸವರಾಜ ಪಾಟೀಲ್ ಇಟಗಿ, ಪಕ್ಷದ ಪ್ರಮುಖರಾದ ಬುಡ್ಡನಗೌಡ ಜಾಗಟಗಲ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಮಲ್ಲಣ್ಣಗೌಡ ಗುಂಡಗುರ್ತಿ, ತಾಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಮೂಡ್ಲಗುಂಡ, ಬಾಪೂಗೌಡ ಪಾಟೀಲ್ ಚಿಕ್ಕಹೊನ್ನಕುಣಿ ಮಾತನಾಡಿದರು.
ಹುಸೇನಸಾಬ್ ನೀಲವಂಜಿ, ಸಿದ್ರಾಮರಡ್ಡಿ ಅಂಚೆಸೂಗೂರು, ಗುರುಪಾದಪ್ಪ ಗೌಡ, ಬಸ್ಸನಗೌಡ,  ಸೂಗನಗೌಡ, ಶಿವನಗೌಡ ಪಾಟೀಲ್ ಹೂವಿನಹೆಡ್ಗಿ, ಶಿವನಗೌಡ ಕಲ್ಮನಿ, ಬಸ್ಸಪ್ಪ ಅಂಬಿಗೇರ, ಮಲ್ಲಪ್ಪ ದೊಡ್ಡಮನಿ, ಬಿ.ಬಿ. ಕೋಟೆ ಸೇರಿ ಗ್ರಾಮದ ಮುಖಂಡರು ಮತ್ತು ಗ್ರಾಪಂ ಅಭಿವೃದ್ಧಿ ಅಧಿಕಾರಿ ಕಿರಣಬಾಬು ಉಪಸ್ಥಿತರಿದ್ದರು.   
ಪರಿಹಾರ ವಿತರಣೆ: ಹಾವು ಕಚ್ಚಿ ್ಛತಪಟ್ಟ ಮೂವರು ವ್ಯಕ್ತಿಗಳ ಕುಟುಂಬದವರಿಗೆ ಶಾಸಕ ವೆಂಕಟೇಶ ನಾಯಕ ಅವರು ತಲಾ 1ಲಕ್ಷ ರು. ಪರಿಹಾರದ ಚೆಕ್ ಈ ವೇಳೆ ವಿತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement