ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬುದ್ಧಿನ್ನಿ; ಟಿಸಿ ಹಾಕಲು ಆಗ್ರಹ

Lingaraj Badiger
Updated On : 25 May 2013, 11:13 am

ಸಿಂಧನೂರು:  ತಾಲೂಕಿನ ಬುದ್ಧಿನ್ನಿ ಗ್ರಾಮದಲ್ಲಿ ಅನೇಕ ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಜನತೆ ಕತ್ತಲಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇರುವ ವಿದ್ಯುತ್ ಪರಿವರ್ತಕ ಗಾಳಿಗೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕೂಡಲೇ ಉತ್ತಮ ಗುಣಮಟ್ಟದ ವಿದ್ಯುತ್ ಪರಿವರ್ತಕವನ್ನು ಹಾಕಬೇಕೆಂದು ಬುದ್ಧಿನ್ನಿ ಗ್ರಾಮದ ಆರ್.ವೈ.ಎಫ್.ಐ. ಅಧ್ಯಕ್ಷ ನಾಗರಾಜ ಗಲಗಿನ, ಉಪಾಧ್ಯಕ್ಷ ಎಂ.ನೀರುಕುಮಾರ, ಸದಸ್ಯ ನಿರುಪಾದಿನಾಯಕ, ಎ.ಐ.ಕೆ.ಕೆ.ಎಸ್.ನ ಅಧ್ಯಕ್ಷ ಬಸವರಾಜ ಪಟೇಲ್ ಆಗ್ರಹಿಸಿದ್ದಾರೆ.
ಈ ಕುರಿತು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಪತ್ರ ಸಲ್ಲಿಸಿರುವ ಅವರು ಬೇಸಿಗೆ ದಿನಗಳಲ್ಲಿ ವಿದ್ಯುತ್ ಇಲ್ಲದಿದ್ದರೆ ಮನೆಗಳಲ್ಲಿ ಮಲಗುವುದು ಕಷ್ಟ. ಮಕ್ಕಳು ಹಾಗೂ ಮುದುಕರು ಪ್ರತಿನಿತ್ಯ ಗೋಳಾಡುತ್ತಿದ್ದಾರೆ. ಅಲ್ಲಿರುವ ಲೈನ್ಮನ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಬಗ್ಗೆ ಅನೇಕ ಬಾರಿ ಮೇಲಾಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ.

ಸಮ್ಮೇಳನಾಧ್ಯಕ್ಷರ ಮೆರವಣಿಗೆ ಅವಶ್ಯ: ಪ್ರೊ. ಮುಕ್ಕುಂದಿಮಠ
ಸಿಂಧನೂರು: ಸಾಹಿತ್ಯ ಸಮ್ಮೇಳನಗಳಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಮ್ಮೇಳನದ ಒಂದು ಭಾಗವಾಗಿದೆ. ರಾಜ್ಯ ಮಟ್ಟದ ಸಮ್ಮೇಳನಗಳಲ್ಲಿಯೂ ಮೆರವಣಿಗೆ ಸಾಹಿತ್ಯಾಸಕ್ತರಿಗೆ ಖುಷಿ ತರುವಂತಿರುತ್ತದೆ. ಆದರೆ ರಾಯಚೂರು ತಾಲ್ಲೂಕು ಸಮ್ಮೇಳನದಲ್ಲಿ ಮೆರವಣಿಗೆ ಮಾಡುವುದು ಬೇಡವೆಂಬ ತೀರ್ಮಾನಕ್ಕೆ ಬಂದಿರುವುದು ಸರಿಯಲ್ಲ. ಮೆರವಣಿಗೆ ಅತ್ಯವಶ್ಯಕ ಎಂದು ಹಿರಿಯ ಸಾಹಿತಿ ಹಾಗೂ ಸಂಶೋಧಕ ಪ್ರೊ.ಎಸ್.ಜಿ. ಮುಕ್ಕುಂದಿಮಠ ಹೇಳಿದರು.
ಅವರು ಈ ಕುರಿತು ಪತ್ರಿಕಾ ಹೇಳಿಕೆ ನೀಡಿ ಸಮ್ಮೇಳನಗಳಲ್ಲಿ ಮೆರವಣಿಗೆ ಮಾಡುವುದರಿಂದ ಸಮಯ ಹಾಗೂ ಶ್ರಮ ವ್ಯರ್ಥವಾಗುತ್ತದೆ ಎಂಬ ಹೇಳಿಕೆಯನ್ನು ಕೆಲವರು ನೀಡಿರುವುದು ಹಾಸ್ಯಾಸ್ಪದವಾಗಿದೆ. ಒಂದು ಸಮ್ಮೇಳನವೆಂದರೆ ಮೆರವಣಿಗೆ, ಗೋಷ್ಠಿಗಳು, ಕವಿಗೋಷ್ಠಿಗಳು, ಸಂವಾದಗಳು ಪೂರಕವಾಗಿರುತ್ತದೆ. ಆದರೆ ಮೆರವಣಿಗೆ ಬೇಡವೆಂಬುದು ಎಷ್ಟು ಸರಿ. ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ಸಮಯಪ್ರಜ್ಞೆ ಇಟ್ಟುಕೊಂಡು ದಕ್ಷತೆ ಹಾಗೂ ಎಚ್ಚರಿಕೆಯಿಂದ ನಡೆಸಿದರೆ ಎಲ್ಲವೂ ಸರಿಯಾದ ಸಮಯಕ್ಕೆ ನಡೆಯುತ್ತವೆ. ಆದರೆ ಮೆರವಣಿಗೆಯೇ ಬೇಡವೆಂಬುವುದು ಸರಿಯಲ್ಲ. ಈ ಬಗ್ಗೆ ರಾಯಚೂರು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ರಾಯಚೂರು ತಾಲ್ಲೂಕಾಧ್ಯಕ್ಷರು ಸಮಿತಿಯ ಸದಸ್ಯರ ಹಾಗೂ ಹಿರಿಯ ಸಾಹಿತಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement