ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಾಲಕ್ಕೆ ಅರ್ಜಿ ಆಹ್ವಾನ

Lingaraj Badiger
Updated On : 25 May 2013, 11:14 am

ರಾಯಚೂರು: ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 2013-14 ನೇ ಸಾಲಿಗೆ ಸಾಲ ಪಡೆಯಲು  ಮುಸ್ಲಿಂ, ಜೈನರು, ಬೌದ್ಧರು, ಸಿಖ್ಖರು, ಪಾರ್ಸಿಗಳು ಹಾಗೂ ಆಂಗ್ಲೊ ಇಂಡಿಯನ್ ಪಂಗಡಕ್ಕೆ ಸೇರಿದವರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರರ ವಾರ್ಷಿಕ ವರಮಾನ ರು. 22 ಸಾವಿರ ಮೀರಿರಬಾರದು. ಅರಿವು ಸಾಲ ಯೋಜನೆಯಡಿ ಈ ಮಿತಿ ಸಡಿಲ ಗೊಳಿಸಿ ರು. 1 ಲಕ್ಷ ನಿಗದಿ ಮಾಡಲಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ 2 ಎಕರೆಯಿಂದ 5 ಎಕರೆ ಕೃಷಿ ಭೂಮಿಯುಳ್ಳವರು ಹಾಗೂ 18ರಿಂದ 55 ವರ್ಷ ವಯೋವಾನದವರು ಅರ್ಜಿ ಸಲ್ಲಿಸಬಹುದಾಗಿದೆ.
ಮಹಿಳೆಯರಿಗೆ ಶೇ.33 ರಷ್ಟು, ಅಂಗವಿಕಲರಿಗೆ ಶೇ.3ರಷ್ಟು ಗುರಿ ನಿಗದಿ ಮಾಡಲಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಅದರ ಪ್ರತಿಯನ್ನು ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ಜೂ.30 ಕಡೆಯ ದಿನವಾಗಿದೆ. ಅರ್ಜಿಗಳನ್ನು ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಅಮೀರ್ ಟ್ರೇಡಿಂಗ್ ಕಾಂಪ್ಲೆಕ್ಸ್, ಅರಬ್ ಮೊಹಲ್ಲಾ, ರಾಯಚೂರು ಇವರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ಢಿಢಿಢಿ.್ಞಟಜ್ಛ.್ಝಟಿ ಗೆ ಸಂಪರ್ಕಿಸಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement