ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಗ್ನಿ ಆಕಸ್ಮಿಕ: ಎರಡು ಗುಡಿಸಲು ಭಸ್ಮ

Vishwanath S
Updated On : 26 May 2013, 2:19 am

ಕನ್ನಡಪ್ರಭ ವಾರ್ತೆ ,  ಸಿಂಧನೂರು ,  ಮೇ 25
ತಾಲೂಕಿನ ಸಿಂಗಾಪುರ ಗ್ರಾಮದ ಹೊರ ವಲಯದಲ್ಲಿದ್ದ ಸುಬ್ಬರಾಜು(ಗಾಂಧಿರಾಜು) ಗೆ ಸೇರಿದ ಎರಡು ಶೆಡ್ಡುಗಳು ಸೇರಿದಂತೆ ಶೆಡ್‌ನಲ್ಲಿದ್ದ ಲಕ್ಷಾಂತರ ರೂ.ಗಳ ಮೌಲ್ಯದ 40 ಓಸಿ ಹಾಗೂ 20 ಪಿಯೂಸಿ ಪೈಪುಗಳು, 40 ಮೀಟರ್ ರ್ಯಾಬಿನ್ ವಯರ್, 4 ಸೀಲಿಂಗ್ ಪ್ಯಾನ್, 4 ಮಂಚಗಳು ಹಾಗೂ ದವಸ ದಾನ್ಯಗಳು ಸೇರಿದಂತೆ ಸುಮಾರು 4 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಸಾಮಾಗ್ರಿಗಳು ಬೆಂಕಿಗೆ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಶುಕ್ರವಾರ ಸಂಭವಿಸಿದೆ.
ನಿರ್ಲಕ್ಷ್ಯ: ಈ ಘಟನೆ ನಡೆಯಲು ಜೆಸ್ಕಾಂ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಗಿದ್ದು, ನಮ್ಮ ಗ್ರಾಮದಲ್ಲಿ ಒಂದುವರೆ ತಿಂಗಳ ಹಿಂದೆ ಇಂತಹದೊಂದು ಘಟನೆ ಸಂಭವಿಸಿದ್ದು, ಆಗ ವಿದ್ದುತ್ ತಂತಿ ಹರಿದು ಬಿದ್ದು ಗುಡಿಸಲು ಸುಟ್ಟಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಹೇಳಿದರೂ ಗಮನಕ್ಕೆ ತೆಗೆದುಕೊಳ್ಳದೆ ನಿರ್ಲಕ್ಷ್ಯ ತೊರುತ್ತಿದ್ದಾರೆಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಲಂಕೆಪ್ಪ ದೇವರಮನಿ ಹೇಳಿದರು.
ಹಳೆಯ ತಂತಿ: ಈ ಗ್ರಾಮಕ್ಕೆ ಸುಮಾರು 35 ವರ್ಷಗಳ ಹಿಂದೆ ತಂತಿ ಮತ್ತು ಕಂಬಗಳನ್ನು ಹಾಕಿದ್ದು, ಅವುಗಳು ಕಾರ್ಬನ್ ಬಂದು ಕತ್ತರಿಸಿ ಬಿಳುತ್ತಿದ್ದು, ಮೇಲಿಂದ ಮೇಲೆ ವಿದ್ಯುತ್ ಅವಘಡ ಸಂಭವಿಸುತ್ತಿವೆ. ಕಾರಣ ಜೆಸ್ಕಾಂ ಇಲಾಖೆಯವರು ಈಗಲಾದರು ಎಚ್ಚೆತ್ತುಕೊಂಡು ಹಳೆಯ ತಂತಿಯನ್ನು ತೆಗೆದು ಹೊಸ ತಂತಿ ಹಾಕಿ ಮುಂದೆ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹರಸಾಹಸ: ತಾಲೂಕ ಕೇಂದ್ರದಿಂದ 40 ಕಿಮೀ ದೂರದಲ್ಲಿರುವ ಈ ಗ್ರಾಮಕ್ಕೆ ಅಗ್ನಿ ಶ್ಯಾಮಕ ದಳದ ವಾಹನದೊಂದಿಗೆ ಸಿಬ್ಬಂದಿ ಬರುವುದರೊಳಗಾಗಿ ಶೆಡ್‌ಗಳು ಸಂರ್ಪೂಣ ಸುಟ್ಟು ಕರಕಲಾಗಿದ್ದು, ಗ್ರಾಮಸ್ಥರು ಹರ ಸಾಹಸ ಪಟ್ಟು ಹೆಚ್ಚಿನ ಅನಾಹುತ ಸಂಭವಿಸದಂತೆ ನೋಡಿಕೊಂಡರು. ನಂತರ ಬಂದ ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣ ನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement