ರಸ್ತೆ ಕಾಮಗಾರಿಗೆ ಶಾಸಕ ನಾಯಕ ಚಾಲನೆ
ದೇವದುರ್ಗ: ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿನ ಏಕಮಿನಾರ್ ಮಸ್ಜೀದ್ ನಿಂದ ಅಂಗಳಾರ ಬಾವಿವರೆಗೆ ರಸ್ತೆ ನಿರ್ಮಾಣ ಮತ್ತು ಡಾಂಬರೀಕರಣ ಕಾಮಗಾರಿಗೆ ಶಾಸಕ ವೆಂಕಟೇಶ ನಾಯಕ ಈಚೆಗೆ ಚಾಲನೆ ನೀಡಿದರು. 2012- 13ನೇ ಸಾಲಿನ ಎಸ್‌ಎಫ್‌ಸಿ ಯೋಜನೆ ಅಡಿ 8.24 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ಅವರು, ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ನಿಗದಿತ ಅವಧಿಯಲ್ಲಿಯೇ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ಮಾಜಿ ಎಂಎಲ್ಸಿ ಬಸವರಾಜ ಪಾಟೀಲ್ ಇಟಗಿ, ತಾಪಂ ಸದಸ್ಯ ಸತ್ಯನಾರಾಯಣ ನಾಯಕ, ಪುರಸಭೆ ಮಾಜಿ ಉಪಾಧ್ಯಕ್ಷ ಲಕ್ಷ್ಮಣ ಗೋಸಲ, ಬಸವಂತ್ರಾಯ ಗೌಡ, ಪುರಸಭೆ ಮಾಜಿ ಸದಸ್ಯ ಪ್ರಭು ಗದ್ಗಿ, ಲಕ್ಷ್ಮಣ ಜ್ಯೋತಿ ಸೇರಿ ಅನೇಕರಿದ್ದರು.