ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಇಸ್ಲಾಂ ಸಂಘಟನೆಗೆ ಖಾಸ್ಮಿ ನೇಮಕ

Lingaraj Badiger
Updated On : 28 May 2013, 10:50 am

ಸಿಂಧನೂರು: ಎರಡು ವರ್ಷದ ಅವಧಿಗೆ ಜಮಾ ಅತೆ ಇಸ್ಲಾಮಿ ಹಿಂದ್ ತಾಲೂಕು ಘಟಕದ ನೂತನ ಅಧ್ಯಕ್ಷ ಮೌ ಲಾನ ಅಬ್ದು ಲ್ ರಷೀದ್ ಖಾಸ್ಮಿ ಅವರನ್ನು ರಾಷ್ಟ್ರೀಯ ಅಧ್ಯಕ್ಷ ಜಲಾಲುದ್ದೀನ್ ಉಮ್ರಿ ನೇಮಿಸಿ ಆದೇಶ ಹೊರಡಿಸಿದ್ದಾರೆ.  
ಕಾಲು ಜಾರಿ ಬಿದ್ದು ವ್ಯಕ್ತಿ ಸಾವು
ಸಿಂಧನೂರು: ಎತ್ತಿಗೆ ನೀರು ಕುಡಿಸಲು ಕೆರೆಗೆ ತೆರಳಿದ ವ್ಯಕ್ತಿಯೊಬ್ಬ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಜಾಲಿಹಾಳದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಗ್ರಾಮದ ಪಂಪಾಪತಿ(45) ಮೃತ ವ್ಯಕ್ತಿ. ಎತ್ತಿಗೆ ನೀರು ಕುಡಿಸಲು ಕೆರೆಗೆ ಹೋದಾಗ ಕಾಲು ಜಾರಿ ಬಿದ್ದಿದ್ದಾನೆ. ಈತನ ಮೃತದೇಹ ಸಂಜೆಯವರೆಗೆ ಹುಡುಕಿದರೂ ಕೆರೆಯಿಂದ ಹೊರ ತೆಗೆಯಲು ಸಾಧ್ಯವಾಗಿಲ್ಲ. ಪರಿಣಿತ ಈಜುಗಾರರನ್ನು ಶವ ತೆಗೆಯಲು ಹುಡುಕುತ್ತಿದ್ದಾರೆಂದು ತಿಳಿದು ಬಂದಿದೆ. ಈ ಕುರಿತು ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್ಐ ಅಮರೇಶ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಅಪಘಾತ: ಸಾವು
ಸಿಂಧನೂರು: ತಾಲೂಕಿನ ಕುನ್ನಟಗಿ ಗ್ರಾಮದಲ್ಲಿ ಸೋಮವಾರ ಸಂಜೆ ಟ್ರ್ಯಾಕ್ಟರ್ ಪಂಕ್ಚರ್ ಹಾಕುವ ವ್ಯಕ್ತಿಯ ಮೇಲೆ ಟ್ರ್ಯಾಕ್ಟರ್ ಜಾಕ್ ಬಿದ್ದಿದ್ದರಿಂದ ತೀವ್ರ ಗಾಯಗೊಂಡು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಕುನ್ನಟಗಿ ಗ್ರಾಮದ ಮೈಬೂಬಸಾಬ ದಿದ್ದಗಿ(38) ಮೃತನು. ಟ್ರ್ಯಾಕ್ಟರ್ ಪಂಕ್ಚರ್ ಹಾಕುವಾಗ ಈ ಘಟನೆ ಜರುಗಿದ್ದು, ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement