ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಕ್ರಿಯಾಶೀಲತೆ ವೃದ್ಧಿಗೆ ಬೇಸಿಗೆ ಶಿಬಿರ ಸಹಕಾರಿ'

Lingaraj Badiger
Updated On : 28 May 2013, 10:49 am

ರಾಯಚೂರು: ಬೇಸಿಗೆಯ ರಜಾ ದಿನಗಳಲ್ಲಿ ಮಕ್ಕಳು ಆಟದ ಜೊತೆಗೆ ಪಾಠ ಕಲಿತು ಕ್ರೀಯಾಶೀಲ ಮನೋವೃತ್ತಿ ಬೆಳೆಸಿಕೊಳ್ಳಲು ಬೇಸಿಗೆ ಶಿಬಿರಗಳು ಸಹಕಾರಿಯಾಗಲಿವೆ ಎಂದು ಚಾಲುಕ್ಯ ಕರಿಯರ್ ಅಕಾಡೆಮಿ ನಿರ್ದೇಶಕ ನಾಗತಿಹಳ್ಳಿ ನಾಗರಾಜ್ ತಿಳಿಸಿದರು.
ನಗರದ ಚಾಲುಕ್ಯ ಟ್ಯೂಟೋರಿಯಲ್ಸ್ನಲ್ಲಿ 2 ತಿಂಗಳ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬೇಸಿಗೆ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೇಸಿಗೆಯಲ್ಲಿ ಮಕ್ಕಳು ವ್ಯರ್ಥ ಕಾಲಹರಣ ಮಾಡಿ ಯಾವುದೋ ಒಂದು ಸಮಸ್ಯೆಗೆ ಗುರಿಯಾಗುವುದನ್ನು ತಪ್ಪಿಸಲು ಹಾಗೂ ರಜಾ ದಿನಗಳಲ್ಲಿ ಆಟದ ಜೊತೆಗೆ ಪಾಠ ಕಲಿಯಲು ಇಂತಹ ಬೇಸಿಗೆ ಶಿಬಿರಗಳು ಸಹಕಾರಿಯಾಗಲಿವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾಧ್ಯಕ್ಷ ಅಶೋಕ ಕುಮಾರ ಸಿ.ಕೆ. ಜೈನ್, ಸಂಸ್ಥೆ ಅಧ್ಯಕ್ಷ ಸಂಗಮೇಶ ಮಂಗಾನವರ, ಕಾರ್ಯದರ್ಶಿ ಮಾಧವಿ ಎಸ್.ಮಂಗಾನವರ, ಶಿಕ್ಷಕರಾದ ಕಾಶಿನಾಥ, ವಿರುಪನಗೌಡ ಸೇರಿದಂತೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement