ಭೂ ಕಂದಾಯ ಬಾಕಿಯಂತೆ ವಸೂಲಿ ಮಾಡಲು ಒತ್ತಾಯ
ರಾಯಚೂರು: ವೇತನ ಪಾವತಿ ಕಾಯ್ದೆಯಡಿ ಆದೇಶದ ಹಣ 22,34,076 ಭೂ ಕಂದಾಯ ಬಾಕಿಯಂತೆ ವಸೂಲಿ ಮಾಡಬೇಕೆಂದು ಒತ್ತಾಯಿಸಿ ಕಾರ್ಮಿಕರ ಪರವಾಗಿ ಕಾರ್ಮಿಕರ ಪ್ರತಿನಿಧಿ ವಿ.ಎಚ್. ಮಾಸ್ತರ್ ಅವರು ತಹಸೀಲ್ದಾರರಿಗೆ ಸೋಮವಾರ ಮನವಿ ಸಲ್ಲಿಸಿದರು.
ಕಾರ್ಮಿಕ ಅಧಿಕಾರಿ ಹಾಗೂ ವೇತನ ಪಾವತಿ ವಿಚಾರಣಾ ಪ್ರಾಧಿಕಾರಗಳ ನ್ಯಾಯಾಲಯದ ಆದೇಶವನ್ನು ಆ.21, 2012ರಂದು ನೀಡಿರುತ್ತಾರೆ. ಅಪರ ಜಿಲ್ಲಾಧಿಕಾರಿಗಳು ತಮಗೆ ಪತ್ರದ ಮೂಲಕ ಭೂ ಕಂದಾಯ ಬಾಕಿಯಂತೆ ವಸೂಲಿ ಮಾಡಲು ಆದೇಶವಿದೆ. ಭೂ ಕಂದಾಯ ಬಾಕಿಯಂತೆ ವಿಷ್ಣು ಜಿನ್ನರ್ಸ್ ಮಾಲೀಕ ರಾಕೇಶ್ ಶೇಠ್ ಇವರಿಂದ ವಸೂಲಿ ಮಾಡಿ ಠೇವಣಿ ಹಣವನ್ನು ರಾಯಚೂರು ಕಾರ್ಮಿಕ ಅಧಿಕಾರಿ ಇವರಲ್ಲಿ ಜಮಾ ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ತಿಮ್ಮಪ್ಪ, ರಾಜು, ತಿಮ್ಮಕ್ಕ ಸೇರಿದಂತೆ ಮಹಿಳೆಯರು ಇದ್ದರು.