ಮಾಜಿ ಪ್ರಧಾನಿ ನೆಹರು ಪುಣ್ಯತಿಥಿ ಆಚರಣೆ
ರಾಯಚೂರು: ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ರಾಷ್ಟ್ರದ ಪ್ರಥಮ ಪ್ರಧಾನಿ ದಿ. ಪಂಡಿತ ಜವಾಹರಲಾಲ್ ನೆಹರು ಅವರ ಪುಣ್ಯತಿಥಿ ಸೋಮವಾರ ಆಚರಿಸಲಾಯಿತು.
ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎ.ವಸಂತ ಕುಮಾರ ಅವರು ನೆಹರು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಮಾತನಾಡಿ, ನೆಹರು ಅವರು ಆಧುನಿಕ ಭಾರತದ ನಿರ್ಮಾಪಕರಾಗಿದ್ದು, ಪಂಚವಾರ್ಷಿಕ ಯೋಜನೆಗಳ ಮುಖಾಂತರ ದೇಶವನ್ನು ಹಸಿರು ಕ್ರಾಂತಿಯ ಮೂಲಕ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ಮತ್ತು ದೇಶದ ಇಂದಿನ ಔದ್ಯೋಗಿಕರಣದ ಬೆಳವಣಿಗೆಗೆ ಕಾರಣರಾದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಜಿ.ಬಸವರಾಜರೆಡ್ಡಿ, ಜಿ.ಶಿವಮೂರ್ತಿ, ತಾಯಣ್ಣ ನಾಯಕ, ರಾಮಕೃಷ್ಣ ನಾಯಕ, ಅಮರೇಗೌಡ ಹಂಚಿನಾಳ, ಸುಧಾಮ, ಕಮಾಂಡರ್ ತಿಮ್ಮಾರೆಡ್ಡಿ, ಜೆ.ತಿಮ್ಮಪ್ಪ, ರಾಣಿ ರಿಚರ್ಡ್, ನೂರಪಾಶಾ, ಲಾಲು ನಾಯಕ, ಯುವರಾಜ ವಕೀಲರು, ಶ್ರೀನಿವಾಸ ಪೋತಗಲ್, ಮಲ್ಲೇಶ ಕೋಲಮಿ, ಪ್ರಕಾಶ ಕುಲ್ಕರ್ಣಿ, ಈರಯ್ಯ ಮೊದಲಾದವರು ಇದ್ದರು.