ಮೂಲಸೌಲಭ್ಯ ಕಲ್ಪಿಸಲು ಆಗ್ರಹ
ಕ.ಪ್ರ. ವಾರ್ತೆ, ರಾಯಚೂರು, ಮೇ 27
ದಲಿತ ಛಲವಾದಿ ಕುಟುಂಬಗಳಿಗೆ ವಾಂಬೆ ಮನೆಗಳ ನಿರ್ಮಿಸಬೇಕು ಮತ್ತು ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಡಾ.ಬಿ.ಆರ್. ಅಂಬೇಡ್ಕರ್ ಜಾಗೃತಿ ಸಂಘದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ನಗರದ ವಾರ್ಡ ಸಂ.27 ರ ನೀರಬಾವಿ ಕುಂಟಾದಲ್ಲಿ ಮೇ 6ರಂದು ವಾಂಬೆ ಮನೆಗಳನ್ನು ನಿರ್ಮಿಸಲು ಕುರಿತು ಹಾಗೂ ಮೇ 14ರಂದು ನೀರಬಾವಿ ಕುಂಟಾದಲ್ಲಿ ದಲಿತ ಛಲವಾದಿ ಕುಟುಂಬಗಳಿಗೆ ರಸ್ತೆ, ಒಳಚರಂಡಿ, ಮಹಿಳಾ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಬೇಡಿಕೆಗಳು: 2003-14ರಲ್ಲಿ ರು. 5,130 ಗಳನ್ನು ವಾಂಬೆ ಮನೆಗಳ ಫಲಾನುಭವಿಗಳು ಪಾವತಿಸಿದ ಉಳಿದ 83 ಮನೆಗಳನ್ನು ಪೂರ್ಣಗೊಳಿಸಬೇಕು. ವಾರ್ಡ್ ನಂ. 27ರ ದಲಿತ ಛಲವಾದಿ ಓಣಿಗೆ ಶಾಶ್ವತ ಕುಡಿವ ನೀರು, ರಸ್ತೆ, ಮಹಿಳಾ ಶೌಚಾಲಯ, ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು. ವಿದ್ಯುತ್ ದೀಪ ಅಳವಡಿಸಬೇಕು. ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸಬೇಕು. ಚರಂಡಿ ಸ್ವಚ್ಛಗೊಳಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವಿ.ಆರ್. ಶಾಂತಕುಮಾರ, ಗೌರವಾಧ್ಯಕ್ಷ ಯುವರಾಜ ವಕೀಲರು, ಉಪಾಧ್ಯಕ್ಷ ಲಕ್ಷ್ಮಣ, ಜಂಟಿ ಕಾರ್ಯದರ್ಶಿ ನರಸಿಂಹಲು, ಮುಖಂಡರಾದ ಮಲ್ಲೇಶ, ಬಸವರಾಜ ಭಂಡಾರಿ, ಯರಗೇರಿ ಭೀಮಣ್ಣ, ಹೊನ್ನಪ್ಪ, ವೀರೇಶ, ಶ್ರೀನಿವಾಸರೆಡ್ಡಿ, ಸಾಧು ಆಂಜನೇಯ, ಪಂಪಮ್ಮ, ರಂಗಮ್ಮ, ದ್ರುಪದಿ, ಜಕ್ಕಲದಿನ್ನಿ ಬಸಮ್ಮ, ಲಕ್ಷ್ಮೀ, ಯಂಕಮ್ಮ, ಯಶೋಧ, ನರಸಮ್ಮ, ರಾಧಮ್ಮ, ಪದ್ಮ, ಮಾರೇಶ, ರಾಮಣ್ಣ, ರಮೇಶ, ರುದ್ರಪ್ಪ ಇದ್ದರು.