ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಂಕಲಿಮಠದ ಜಾತ್ರೆ; ರೊಟ್ಟಿ ದಾಸೋಹ ಸೇವೆಗೆ ಮನವಿ

Lingaraj Badiger
Updated On : 29 May 2013, 11:12 am

ಸಿಂಧನೂರು: ಲಿಂಗಸೂಗೂರು ತಾಲೂಕಿನ ಅಂಕಲಿಮಠದಲ್ಲಿ ಮೇ 31 ಹಾಗೂ ಜೂನ್ 1ರಂದು ನಡೆಯುವ ಎರಡು ದಿನಗಳ ಜಾತ್ರಾ ಮಹೋತ್ಸವಕ್ಕೆ ರೊಟ್ಟಿ ದಾಸೋಹ ಸೇವೆ ಮಾಡಬೇಕೆಂದು ಕೋಟೆ ಪೇಟೆಯ ಸದ್ಭಕ್ತರು ವಿನಂತಿಸಿದ್ದಾರೆ. ಮೇ 29ರಂದು ಬೆಳಗ್ಗೆ 10 ಗಂಟೆಗೆ ಮೆರವಣಿಗೆ ಮೂಲಕ ಕೋಟೆಯ ಸಕಲ ಸದ್ಭಕ್ತರು ರೊಟ್ಟಿ ದಾಸೋಹ ಸೇವೆಯನ್ನು ಕೊಂಡೊಯ್ಯಲಾಗುವುದು. ಅಷ್ಟರಲ್ಲಿ ಸದ್ಭಕ್ತರು ಕೋಟೆ ವೀರಣ್ಣ ದೇವಸ್ಥಾನ ಅರ್ಚಕ ಮಲ್ಲಯ್ಯಸ್ವಾಮಿ ಅವರನ್ನು ಸಂಪರ್ಕಿಸಬೇಕೆಂದು ಕೋರಿದ್ದಾರೆ.
ಪ್ರವೇಶಕ್ಕೆ ಅರ್ಜಿ ಆಹ್ವಾನ
ಗುಲ್ಬರ್ಗ: ನಗರದ ಬಸವ ಚೇತನ ಹಾಗೂ ಮಾದಲಾಂಬಿಕಾ ವಿದ್ಯಾರ್ಥಿ ವಿದ್ಯಾರ್ಥಿನಿಯರ ಪ್ರಸಾದ ನಿಲಯಗಳ ಪ್ರವೇಶಕ್ಕಾಗಿ ಜೂನ್ 30ರಂದು ಸಂದರ್ಶನ ನಡೆಯಲಿದೆ.
ಕಳೆದ 8 ವರ್ಷಗಳಿಂದ ಈ ಸಂಸ್ಥೆ ನಡೆಯುತ್ತಿದ್ದು, ಬಡ ಮತ್ತು ಪ್ರತಿಭಾವಂತ ಉತ್ತಮ ಚಾರಿತ್ರ್ಯವುಳ್ಳ ಪಿಯುಸಿ, ಡಿಪ್ಲೋಮಾ, ಬಿಎ, ಬಿಎಸ್ಸಿ, ಬಿಸಿಎ, ಬಿಕಾಂ, ಬಿಬಿಎಂ, ಐಟಿಐ, ಡಿಇಡಿ, ನರ್ಸಿಂಗ್, ಬಿಇ, ಎಂಇ, ಎಂಬಿಬಿಎಸ್, ಎಂಎಸ್, ಎಂಡಿ, ಸ್ನಾತಕೋತ್ತರ ಪದವಿಗಳ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳು ಪ್ರವೇಶಕ್ಕೆ ಅರ್ಹರು.
ಗುಲ್ಬರ್ಗ, ಬೀದರ್, ರಾಯಚೂರು, ಬಳ್ಳಾರಿ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು ಮತ್ತು ಕರ್ನಾಟಕದ ಯಾವುದೇ ಜಿಲ್ಲೆಗಳಿಂದ ಬಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗಾಗಿ ಬಸವ ಸೇವಾ ಸಂಸ್ಥೆಯ ಕಾರ್ಯಾಲಯದಲ್ಲಿ ಮೇ 30 ರಂದು ಬೆಳಗ್ಗೆ 10ಗಂಟೆಯಿಂದ ಸಂಜೆ 5ರವರೆಗೆ ಸಂದರ್ಶನ ನಡೆಯಲಿದೆ. ಸಂದರ್ಶನಕ್ಕೆ ಪಾಲಕರೊಂದಿಗೆ ವಿದ್ಯಾರ್ಥಿಗಳು ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ 9900836446, 9632294053ಗೆ ಸಂಪರ್ಕಿಸಲು ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಬಿ.ಎಚ್. ಪುರಂತಗಿ, ಕಾರ್ಯದರ್ಶಿ ಎಂ.ಬಿ. ಅಂಬಲಗಿ ಕೋರಿದ್ದಾರೆ.
ಪಾಲಿಟೆಕ್ನಿಕ್: ಅವಧಿ ವಿಸ್ತರಣೆ
ಗುಲ್ಬರ್ಗ: ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ 11 ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್ ಆನ್‌ಲೈನ್ ಇಂಟರ್‌ಆಕ್ಟೀವ್ ಕೌನ್ಸೆಲಿಂಗ್ ಕೇಂದ್ರಗಳ ಮೂಲಕ ವಿವಿಧ ಎಂಜಿನಿಯರಿಂಗ್ ಮತ್ತು ನಾನ್ ಎಂಜಿನಿಯರಿಂಗ್ ಕೋರ್ಸುಗಳ ಪ್ರಥಮ ಡಿಪ್ಲೋಮಾದಲ್ಲಿ ವ್ಯಾಸಂಗ ಮಾಡಲು ಇಚ್ಚಿಸುವ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿ ಒಟ್ಟಾರೆ ಶೇ.35 ಅಂಕಗಳನ್ನು ಪಡೆದ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಜೂನ್ 1ರವರೆಗೆ ವಿಸ್ತರಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement