ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಾಳಸಂತೆಯಲ್ಲಿ ಪಡಿತರ ಮಾರಾಟ ಆರೋಪ; ಅಧಿಕಾರಿಗಳ ಭೇಟಿ

Lingaraj Badiger
Updated On : 29 May 2013, 11:16 am

ಮುದಗಲ್: ಪಟ್ಟಣಕ್ಕೆ ಸಮೀಪದ ಬುದ್ದಿನ್ನಿ, ತೆರಿಭಾವಿ ಗ್ರಾಮಗಳಿಗೆ ನ್ಯಾಯಬೆಲೆ ಅಂಗಡಿ ಮುಖಾಂತರ ವಿತರಣೆಯಾಗಬೇಕಿದ್ದ ಪಡಿತರ ಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರ ಆರೋಪದ ಹಿನ್ನೆಲೆಯಲ್ಲಿ ಅವಳಿ ಗ್ರಾಮಗಳಿಗೆ ಮಂಗಳವಾರ ಆಹಾರ ನಿರೀಕ್ಷಕ ಕುಲಕರ್ಣಿ ಭೇಟಿ ನೀಡಿ ಪರಿಶಿಲಿಸಿದರು.
ಲಿಂಗಸ್ಗೂರು ಉಪವಿಭಾಗಾಧಿಕಾರಿ ಟಿ.ಯೋಗೇಶ ಅವರಿಗೆ ಸೋಮವಾರ ಗ್ರಾಮಸ್ಥರು ಪಡಿತರ ಧಾನ್ಯಗಳನ್ನು ಎರಡು ತಿಂಗಳಿಂದ ವಿತರಣೆ ಮಾಡದೇ ಇರುವುದಕ್ಕೆ ಕಾಳಸಂತೆ ಮಾರಾಟದ ಆರೋಪದ ಮನವಿ ಸಲ್ಲಿಸಿದ್ದರು.
ಸಮಜಾಯಿಷಿ: ಅದರನ್ವಯ ಎರಡೂ ಗ್ರಾಮಗಳಿಗೆ ಆಹಾರ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರ ಅಹವಾಲನ್ನು ಆಲಿಸಿ ಎರಡೂ ಗ್ರಾಮಗಳ ನಡುವೆ ಒಂದು ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಿ ಮಂಜೂರಾತಿ ಮಾಡಿಸುವ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಮಜಾಯಿಷಿ ನೀಡಿದರು.
ಎರಡೂ ಗ್ರಾಮಗಳ ಪಡಿತರ ಧಾನ್ಯಗಳನ್ನು ಗುಡಿಹಾಳ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಲಗತ್ತಿಸಲಾಗಿದ್ದು, ಕಳೆದ ಎರಡು ತಿಂಗಳಿಂದ ಗ್ರಾಮಗಳಲ್ಲಿ ಪಡಿತರ ವಿತರಣೆಯಾಗಿಲ್ಲ, ಅವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂದು ಸ್ಥಳಕ್ಕೆ ಆಗಮಿಸಿದ ಆಹಾರ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದರು.
ಈ ಸಮಯದಲ್ಲಿ ಗ್ರಾಮದ ಚನ್ನಮಲ್ಲಪ್ಪ, ನಾಗಪ್ಪ, ಬೈಲಪ್ಪ, ಹೇಮನಗೌಡ, ವೀರೇಶ, ಶರಣಪ್ಪ, ನಿಂಗನಗೌಡ, ನಾಗಪ್ಪ ಗೊಂದಿ, ದ್ಯಾವಪ್ಪ ಪರಾಂಪೂರ, ಮುಂತಾದವರು ಭಾಗವಹಿಸಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement