ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ; ಶ್ಲಾಘನೆ

Lingaraj Badiger
Updated On : 29 May 2013, 11:16 am

ಲಿಂಗಸ್ಗೂರು: ಪಟ್ಟಣದ ಸ್ವಾಮಿ ವಿವೇಕಾನಂದ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಬೇಸಿಗೆ ತರಗತಿಗಳ ನಡೆಸುವ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಪಿಎಸ್‌ಐ ಸಿದ್ದರಾಮಯ್ಯ ಹೇಳಿದರು.
ಬೇಸಿಗೆ ತರಗತಿಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬೇಸಿಗೆ ಸಮಯದಲ್ಲಿ ಮಕ್ಕಳು ಆಟೋಟಗಳಲ್ಲಿ ಕಾಲಹರಣ ಮಾಡದೆ ಇಂತಹ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿ ಪಾಠ-ಪ್ರವಚನಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮುಂದಿನ ಶೈಕ್ಷಣಿಕ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಸಂಸ್ಥೆ ಅಧ್ಯಕ್ಷ ಶಾಂತನಗೌಡ ಪಾಟೀಲ್, ಸಂಪನ್ಮೂಲ ವ್ಯಕ್ತಿ ಸಿ.ವಿ. ಪಾಟೀಲ್, ವ್ಯವಸ್ಥಾಪಕ ಆರ್.ವಿ. ಖಾತರಕರ, ವಿಜಯಕುಮಾರ, ತಿರುಪತಿ, ಚನ್ನಬಸವ, ಶರಣಬಸವ ಸೇರಿದಂತೆ ಉಪಸ್ಥಿತರಿದ್ದರು. ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಪ್ರವೀಣ ಕುಮಾರ, ಚೇತನಕುಮಾರ, ಗುಂಡಮ್ಮ, ಪ್ರಜ್ವಲ್, ರವಿಕುಮಾರ, ಪ್ರಜ್ವಲ್ ಅಮರಗುಂಡಪ್ಪ ಇವರನ್ನು ಸನ್ಮಾನಿಸಲಾಯಿತು.
ಅನೈತಿಕ ಚಟುವಟಿಕೆ; ಕ್ರಮಕ್ಕೆ ಆಗ್ರಹ
ದೇವದುರ್ಗ: ದೊಡ್ಡಬಳ್ಳಾಪುರದ ಎಸ್.ಆರ್. ವ್ಯಾಲಿ ರೆಸಾರ್ಟ್‌ನ ಲೈಸನ್ಸ್ ರದ್ದುಪಡಿಸಿ, ಅನೈತಿಕ ಚಟುವಟಿಕೆಗಳಿಗೆ ಅವಕಾಶ ನೀಡಿದವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ನಗರ ಘಟಕ ಅಧ್ಯಕ್ಷ ಶಿವುಕುಮಾರ ಚಲುವಾದಿ ಒತ್ತಾಯಿಸಿದ್ದಾರೆ.
ಸಿಎಂಗೆ ಬರೆದ ಮನವಿಯಲ್ಲಿ ದೊಡ್ಡಬಳ್ಳಾಪುರ ಹತ್ತಿರದ ಘಾಟಿ ಸುಬ್ರಮಣ್ಯಂ ಪುಣ್ಯಕ್ಷೇತ್ರದಲ್ಲಿ ಎಸ್.ಆರ್. ವ್ಯಾಲಿ ರೆಸಾರ್ಟ್‌ನಲ್ಲಿ ನಂಗಾನಾಚ್ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಇಂತಹ ಅನೈತಿಕ ಅಕ್ರಮ ಚಟುವಟಿಕೆಗಳಿಗೆ ರಾಜ್ಯ ಸರ್ಕಾರವು ಕ್ರಮ ಕೈಗೊಂಡು ದೇಶದ ಸಂಸ್ಕೃತಿಯನ್ನು ಕಾಪಾಡುವಂತೆ ಸೂಕ್ತ ವ್ಯವಸ್ಥೆ ಮಾಡಿ ರೆಸಾರ್ಟ್ ಅನ್ನು ಮುಚ್ಚಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement