ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬೋಗಸ್ ಪಡಿತರ ಚೀಟಿ ಆರೋಪ; ಅಧಿಕಾರಿಗಳಿಂದ ಪರಿಶೀಲನೆ

Lingaraj Badiger
Updated On : 29 May 2013, 11:16 am

ಕನ್ನಡಪ್ರಭ ವಾರ್ತೆ, ರಾಯಚೂರು, ಮೇ 28
ಇಲ್ಲಿನ ಹರಿಜನವಾಡ ಪ್ರದೇಶದ ಎರಡು ನ್ಯಾಯಬೆಲೆ ಅಂಗಡಿಗಳಲ್ಲಿ ಬೋಗಸ್ ಪಡಿತರ ಚೀಟಿ ಬಳಕೆ ಮಾಡಿ ಅಕ್ರಮವಾಗಿ ಆಹಾರ ಧಾನ್ಯ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಮಂಗಳವಾರ ಆಹಾರ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಡಾ. ಬಾಬು ಜಗಜೀವನರಾಮ್ ಆದರ್ಶ ಸಂಘದಿಂದ ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿದ್ದ ದೂರಿಗೆ ಸಂಬಂಧಿಸಿ ಡಿಸಿ ಆದೇಶದ ಹಿನ್ನೆಲೆ ಆಹಾರ ಇಲಾಖೆಯ ಉಪನಿರ್ದೇಶಕ ಗುರುರಾಜ್ ಮತ್ತಿತರರಿದ್ದ ತಂಡದ ಸದಸ್ಯರು ಮಂಗಳವಾರ ನಗರದ ಹರಿಜನವಾಡ ಪ್ರದೇಶದಲ್ಲಿ ಗಣೇಶ್ ನ್ಯಾಯಬೆಲೆ ಅಂಗಡಿ ಮತ್ತು ಬಾಪೂಜಿ ನ್ಯಾಯಬೆಲೆ ಅಂಗಡಿಯ ವ್ಯಾಪ್ತಿಯಲ್ಲಿ ಅಧಿಕಾರಿಗಳು ಮನೆ ಮನೆಗೆ ತೆರಳಿ ಬೋಗಸ್ ಕಾರ್ಡ್‌ಗಳ ಬಗ್ಗೆ ಸಮೀಕ್ಷೆ ನಡೆಸಿದರು.
ಮನೆಗೆ ತೆರಳಿ ನಿವಾಸಿಗಳನ್ನು ಭೇಟಿ ಮಾಡಿದ ಅಧಿಕಾರಿಗಳು ಸರ್ಕಾರ ಪಡಿತರ ಪದ್ಧತಿ ಅಡಿ ಒದಗಿಸುವ ಆಹಾರ ಧಾನ್ಯಗಳು ಪ್ರತಿ ತಿಂಗಳು ಸಮರ್ಪಕವಾಗಿ ದೊರೆಯುತ್ತಿವೆಯೇ ಎಂಬ ಬಗ್ಗೆ ನಿವಾಸಿಗಳಿಂದ ಕೇಳಿ ಮಾಹಿತಿ ಪಡೆದರು. ಅದೇ ರೀತಿ ಕೆಲಸ ಸರ್ಕಾರಿ ಅಧಿಕಾರಿಗಳೂ ಅಂತ್ಯೋದಯ ಕಾರ್ಡ್ ಪಡೆದ ಬಗ್ಗೆಯೂ ಅವರ ಮನೆಗಳಿಗೆ ತೆರಳಿ ಪರಿಶೀಲಿಸಲಾಯಿತು.
ಈ ವೇಳೆ ಬೋಗಸ್ ಎಂದು ಹೇಳಲಾಗಿರುವ ಎಲ್ಲ ಪಡಿತರ ಚೀಟಿಗಳನ್ನು ಕೂಲಂಕಶವಾಗಿ ಪರಿಶೀಲಿಸಿದ ಅಧಿಕಾರಿಗಳು, ಈ ಕುರಿತು ವರದಿಯೊಂದನ್ನು ಜಿಲ್ಲಾಧಿಕಾರಿಗೆ ಸಲ್ಲಿಸುವುದಾಗಿ ತಿಳಿಸಿದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement