ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಿಬಿಎಸ್‌ಇ: ವಿಜಯತಗೆ ಶೇ.98, ಪವನಕುಮಾರಗೆ ಶೇ. 90 ಅಂಕ

Lingaraj Badiger
Updated On : 29 May 2013, 11:16 am

ಸಿಂಧನೂರು: ಇತ್ತೀಚೆಗೆ ನಡೆದ ಕೇಂದ್ರಿಯ ಪಠ್ಯಕ್ರಮದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಗರದ ವಿಜಯತ ತಂದೆ ಬಿ. ರಾಜಶೇಖರ ಶೇ. 98 ಅಂಕಗಳನ್ನು ಪಡೆದುಕೊಂಡರೆ, ಪವನಕುಮಾರ ವಿಶ್ವನಾಥ ಪ್ರಭು ಅವರು ಶೇ. 90ರಷ್ಟು ಅಂಕಗಳನ್ನು ಗಳಿಸುವ ಮೂಲಕ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಕೊಪ್ಪ ತಾಲೂಕಿನ ಜಯಪುರ ಗ್ರಾಮದ ಸತ್ಯಸಾಯಿ ದಿವ್ಯಜ್ಯೋತಿ ವಿದ್ಯಾ ಕೇಂದ್ರದಲ್ಲಿ ಅಭ್ಯಾಸ ಮಾಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಪಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.
ಜೂ. 3ಕ್ಕೆ ನೃತ್ಯಾವಧಾನ ಕಾರ್ಯಾಗಾರ
ರಾಯಚೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಜೂ. 3ರಿಂದ 7ರವರೆಗೆ ಐದು ದಿನಗಳ ನೃತ್ಯಾವಧಾನ ವಿಶೇಷ ನೃತ್ಯ ಕಾರ್ಯಾಗಾರವನ್ನು ಅಕಾಡೆಮಿ ಅಧ್ಯಕ್ಷೆ ವೈಜಯಂತಿ ಕಾಶಿ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಮೂಲ್ಕಿಯ ಪುನರುರಿ ಶ್ರೀ ವಿಶ್ವನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದೆ.
ಬೆಳಗ್ಗೆ 7ರಿಂದ ಸಂಜೆ 8.30ರವರೆಗೆ ಪರಿಣಿತ ಹೊಂದಿರುವ ಗುರುಗಳಿಂದ ತರಬೇತಿ ನೀಡಲಾಗುವುದು. ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ಕನಿಷ್ಠ 3 ವರ್ಷ ನೃತ್ಯದಲ್ಲಿ ಶಿಕ್ಷಣವನ್ನು ಪಡೆದಿರಬೇಕು. 15 ವರ್ಷ ವಯೋವಾನಕ್ಕಿಂತ ಮೇಲ್ಪಟ್ಟವರಾಗಿರಬೇಕು. ಭಾಗವಹಿಸಿದ ಅಭ್ಯರ್ಥಿಗಳಿಗೆ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಅಕಾಡೆಮಿ ವತಿಯಿಂದ ಒದಗಿಸಲಾಗುತ್ತದೆ. ಭಾಗವಹಿಸಲು ಮೇ 30ರೊಳಗೆ ಇ-ಮೇಲ್ ್ಞಛ್ಠಟಿಛಡಿಛ್ಞಛಡಛಟ್ಜಿಜಜಡಿಛ.್ಜಟಛ್ಝಟ.್ಛ್ಟಟ ಅಥವಾ ಪತ್ರದ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ವಿವರಕ್ಕೆ ದೂ. 080- 22215072 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement