ಪದಾಧಿಕಾರಿಗಳ ಆಯ್ಕೆಗೆ ಒತ್ತಾಯ
ಲಿಂಗಸ್ಗೂರು: ಭೋವಿ ಅಭಿವೃದ್ಧಿ ಮಂಡಳಿಗೆ ಸೂಕ್ತ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಹೆಚ್ಚಿನ ಅನುದಾನ ಬಿಡುಗಡೆ ಗೊಳಿಸಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ಭೋವಿ(ವಡ್ಡರ) ಯುವ ವೇದಿಕೆ ಕಾರ್ಯಕರ್ತರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಸುಮಾರು 70 ಲಕ್ಷ ಜನಸಂಖ್ಯೆ ಹೊಂದಿದ ಭೋವಿ ಸಮಾಜ ಶೈಕ್ಷಣಿಕ, ಆರ್ಥಿಕ, ರಾಜಕೀಯ ಸೇರಿದಂತೆ ಎಲ್ಲ ರಂಗಗಳಲ್ಲಿ ಹಿಂದುಳಿದಿದ್ದು, ಸಮಾಜ ಅಭಿವೃದ್ಧಿಗೆ ಭೋವಿ ಅಭಿವೃದ್ಧಿ ನಿಗಮ ತಕ್ಷಣ ಜಾರಿಗೊಳಿಸಿ ಸೂಕ್ತ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕೆಂದು ವೇದಿಕೆ ಅಧ್ಯಕ್ಷ ರಮೇಶ ಕಟ್ಟಿಮನಿ, ಸಿದ್ದು ಹಿರೇಮನಿ, ವೀರೇಶ ಹಿರೇಮನಿ, ರಮೇಶ ಪೈದೊಡ್ಡಿ ಮನವಿಯಲ್ಲಿ ಒತ್ತಾಯಿಸಿದ್ದಾರೆ.