ಸಾಹಿತ್ಯ ಸಮ್ಮೇಳನ; ಸಭೆ ಯಶಸ್ವಿ
ರಾಯಚೂರು: ಮುಂದಿನ ತಿಂಗಳು ಜೂ.15 ರಂದು ನಡೆಯಲಿರುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ವಿವಿಧ ಉಪಸಮಿತಿಗಳ ಪೂರ್ವಭಾವಿ ಸಭೆಯು ಮಂಗಳವಾರ ಸಂಜೆ ನಗರದ ಐಎಂಎ ಹಾಲ್ನಲ್ಲಿ ನಡೆಯಿತು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಮಾತನಾಡಿ, ಉಪಸಮಿತಿಯ ಸದಸ್ಯರು ಸಾಹಿತ್ಯ ಸಮ್ಮೇಳನದ ಯಶಸ್ಸಿನ ನಿಟ್ಟಿನಲ್ಲಿ ಶ್ರಮಿಸುವಂತೆ ಮನವಿ ಮಾಡಿದರು.
ತಾಲೂಕು ಕಸಾಪ ಅಧ್ಯಕ್ಷ ಚಿದಾನಂದ ಸಾಲಿ, ಲೋಹಿಯಾ ಪ್ರತಿಷ್ಠಾನದ ಅಧ್ಯಕ್ಷ ಭೀಮನಗೌಡ ಇಟಗಿ ಪಾಲ್ಗೊಂಡು ಮಾತನಾಡಿದರು.
ಸಭೆಯಲ್ಲಿ ವಿವಿಧ ಉಪಸಮಿತಿಗಳ ಅಧ್ಯಕ್ಷರು, ಸದಸ್ಯರು ಹಾಜರಿದ್ದು ಸಲಹೆ ಸೂಚನೆ ನೀಡಿದರು. ಸಭೆಯಲ್ಲಿ ಪ್ರಮುಖರಾದ ವಿ.ಎನ್.ಅಕ್ಕಿ, ಡಾ.ಜಗದೀಶ್, ಎಚ್.ಎಚ್.ಮ್ಯಾದಾರ್, ಸುರೇಶ್, ವಿನೋದರೆಡ್ಡಿ, ಆಶಾ ಪ್ರೇಮಲತಾ ಸೇರಿದಂತೆ ಅನೇಕರಿದ್ದರು.