ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

15 ದಿನ ವಿವಿಧ ವಿಧೇಯಕ ಕಾರ್ಯಕ್ರಮ: ಶೇಕ್ಷಾಖಾದ್ರಿ

Lingaraj Badiger
Updated On : 31 May 2013, 11:43 am

ಸಿಂಧನೂರು: ಸಿಐಟಿಯು ಸ್ಥಾಪನೆಯಾಗಿ 43 ವರ್ಷಗಳಾಗಿದ್ದು, ಸ್ಥಾಪನಾ ದಿನಾಚರಣೆ ಅಂಗವಾಗಿ 15 ದಿನಗಳ ಕಾಲ ವಿವಿಧ ವಿಧೇಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಿಐಟಿಯು ಜಿಲ್ಲಾ ಸಮಿತಿ ತೀರ್ಮಾನಿಸಿದೆ ಎಂದು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಶೇಕ್ಷಾಖಾದ್ರಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಗುರುವಾರ ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು 43 ವರ್ಷಗಳಲ್ಲಿ ಸಿಐಟಿಯು ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಸಂಘಟನೆ ಕಟ್ಟುವ ಮೂಲಕ ಅವರ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ನಡೆಸುತ್ತಾ ಬಂದಿದೆ. ಅವರಿಗೆ ಹಕ್ಕು ಕೊಡಿಸುವಲ್ಲಿ ಯಶಸ್ವಿಯಾಗಿದೆ. ಅಸಂಘಟಿತ ಕಾರ್ಮಿಕರಾದ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರನ್ನು ಸಂಘಟಿಸಿ ಗೌರವ ಧನ ಹೆಚ್ಚಿಸುವಲ್ಲಿ, ಉದ್ಯೋಗದ ರಕ್ಷಣೆ, ಪಿಂಚಣಿ ಜಾರಿ ಮಾಡಿಸುವಲ್ಲಿ ಯಶಸ್ವಿಯಾಗಿದೆ.
ಹಮಾಲಿ ಕಾರ್ಮಿಕರು, ಅಟೋ ಇನ್ನಿತರ ವಾಹನ ಚಾಲಕರಿಗೆ ಅಪಘಾತ ವಿಮೆ ಯೋಜನೆ, ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚನೆ, ಸರ್ಕಾರಿ, ಅರೆಸರ್ಕಾರಿ ಇಲಾಖೆಗಳಲ್ಲಿ ದುಡಿಯುತ್ತಿರುವ ಅಂದರೆ ಅರಣ್ಯ ಇಲಾಖೆ, ಆರೋಗ್ಯ, ಬಿಎಸ್ಎನ್ಎಲ್ ಇಲಾಖೆಯಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ನ್ಯಾಯ ಒದಗಿಸಲಾಗಿದೆ. ದಿನಗೂಲಿ, ಗೌರವ ಧನ ಗುತ್ತಿಗೆ ಪದ್ಧತಿಯನ್ನು ಆಧರಿಸಿ ದುಡಿಸಿಕೊಳ್ಳುವುದನ್ನು ನಿಲ್ಲಿಸಿ ಕಾರ್ಮಿಕರನ್ನು ನಿಯೋಜನೆ ಮಾಡಿಕೊಳ್ಳುವಲ್ಲಿ ಸಿಐಟಿಯು ಶ್ರಮವಹಿಸಿದೆ. ಜೂನ್ 1ರಿಂದ 13ರವರೆಗೆ ಜಿಲ್ಲಾದ್ಯಂತ ಪ್ರಚಾರ ಆಂದೋಲನಾ ತಯಾರಿ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಭೆ: ಪ್ರಚಾರ ಆಂದೋಲನದ ಯಶಸ್ವಿಯಾಗಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ, ಕಾರ್ಯದರ್ಶಿ ಆರ್.ಎಸ್.ಬಸವರಾಜ ಅವರ ನೇತೃತ್ವದಲ್ಲಿ ಜೂನ್ 1ರಂದು ಜಿಲ್ಲಾ ಸಮಿತಿ ಸಭೆಯನ್ನು ಸಿಂಧನೂರಿನಲ್ಲಿ ಕರೆಯಲಾಗಿದೆ. ಸಿಐಟಿಯು ನೇತೃತ್ವದ ಎಲ್ಲಾ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಬೇಕೆಂದು ಶೇಕ್ಷಾಖಾದ್ರಿ ವಿನಂತಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement