ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಜಿಲ್ಲೆಯ ಬಹುತೇಕ ಕಡೆ ಉತ್ತಮ ಮಳೆ

Lingaraj Badiger
Updated On : 31 May 2013, 11:59 am

ಕನ್ನಡಪ್ರಭ ವಾರ್ತೆ, ರಾಯಚೂರು, ಮೇ 30
ಜಿಲ್ಲೆಯಲ್ಲಿ ಬುಧವಾರ ರಾತ್ರಿ ಬಹುತೇಕ ಕಡೆ ಉತ್ತಮ ಮಳೆ ಸುರಿದಿದ್ದು, ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಮಳೆ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದಲ್ಲಿ 57ಮಿಮೀ ಮಳೆಯಾಗಿದೆ. ಈ ವೇಳೆ ಬಿರುಗಾಳಿಗೆ ರಾಯಚೂರು ತಾಲೂಕಿನ ಅರಷಿಣಗಿಯಲ್ಲಿ ಮನೆಗೆ ಹೊದಿಸಿದ ತಗಡಿನ ಶೀಟುಗಳು ಹಾರಿ ಹೋಗಿವೆ.
ಎರಡು ಗಂಟೆಗೂ ಹೆಚ್ಚು ಕಾಲ: ನಗರದಲ್ಲಿ ಬುಧವಾರ ಸಂಜೆಯಾಗುತ್ತಿದ್ದಂತೆಯೇ ಸುರಿಯಲಾರಂಭಿಸಿದ ಮಳೆ ನಂತರದಲ್ಲಿ ಬಿರುಗಾಳಿಯೊಂದಿಗೆ ಬಿಡದೇ ಎರಡು ಗಂಟೆಗೂ ಹೆಚ್ಚು ಕಾಲ ಸುರಿಯಿತು. ಇದರಿಂದ ನಗರದಲ್ಲಿ ವಿದ್ಯುತ್ ಕೈಕೊಟ್ಟು ನಾಗರಿಕರು ಪರದಾಡಿದರು. ಅದೇ ರೀತಿ ರಸ್ತೆಗೆ ಚರಂಡಿ ನೀರು ನುಗ್ಗಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು. ನಗರದ ಸಿಯಾತಲಾಬ್, ಗಾಲಿಬ್ ನಗರ ಮತ್ತಿತರೆಡೆಯ ತಗ್ಗು ಪ್ರದೇಶಗಳ ಮನೆಗಳಿಗೆ ರಾತ್ರಿ ವೇಳೆ ಮಳೆಯ ನೀರು ನುಗ್ಗಿದ್ದರಿಂದ ನಿವಾಸಿಗಳು ಪರದಾಡಿದರು. ಕೆಲವೆಡೆ ಮನೆಗೆ ನುಗ್ಗಿದ ನೀರು ಹೊರಹಾಕುವ ಕಾರ್ಯದಲ್ಲಿ ನಿವಾಸಿಗಳು ಗುರುವಾರ ಬೆಳಗ್ಗೆಯೂ ನಡೆಸಿದ್ದು ಕಂಡುಬಂದಿತು.
ನಗರದಲ್ಲಿ ಸುರಿದ ಮಳೆಯಿಂದಾಗಿ ಕಳೆದ ಕೆಲ ದಿನಗಳಿಂದ ಹೆಚ್ಚಿದ್ದ ತಾಪಮಾನ ಕಡಿಮೆಯಾಗಿ ಜನತೆಗೆ ತಂಪು ತಂದಿತು.
ರಾಯಚೂರು ತಾಲೂಕಿನ ಅರಷಿಣಗಿ ಗ್ರಾಮದಲ್ಲಿ 10ಕ್ಕೂ ಹೆಚ್ಚಿನ ಮನೆಗಳಿಗೆ ಹೊದಿಸಿದ್ದ ತಗಡಿನ ಶೀಟುಗಳು ಬಿರುಗಾಳಿಗೆ ಸಿಲುಕಿ ಹಾರಿಹೋಗಿವೆ. ಅದೇ ರೀತಿ ಈ ಗ್ರಾಮದ ಮನೆಯೊಂದರ ಗೋಡೆ ಕುಸಿದಿದ್ದು, ಯಾವುದೇ ಜೀವ ಹಾನಿ ಸಂಭವಿಸಿಲ್ಲ.
ಮಳೆಯ ಪ್ರಮಾಣ: ರಾಯಚೂರು ತಾಲೂಕಿನ ರಾಯಚೂರಿನಲ್ಲಿ 49ಮಿಮೀ, ಯರಗೇರಾ- 3ಮಿಮೀ, ಕಲ್ಮಲಾ-20 ಮಿಮೀ, ದೇವಸೂಗೂರು-30.6 ಮಿಮೀ, ಜೇಗರಕಲ್- 38.2 ಮಿಮೀ, ಯರಮರಸ್ನಲ್ಲಿ 53.8 ಮಿಮೀ ಮಳೆಯಾಗಿದೆ.
ಮಾನವಿಯಲ್ಲಿ 4 ಮಿಮೀ ಮಳೆಯಾಗಿದ್ದರೆ, ಅದೇ ತಾಲೂಕಿನ ಕಲ್ಲೂರು- 35.8 ಮಿಮೀ, ಸಿರವಾರ- 40.4 ಮಿಮೀ, ಮಲ್ಲಟ- 21 ಮಿಮೀ, ಕುರುಕುಂದಾ- 36 ಮಿಮೀ, ಪಾಮನಕಲ್ಲೂರು- 21.2 ಮಿಮೀ, ಕವಿತಾಳ- 19ಮಿಮೀ, ರಾಜಲಬಂಡಾ- 16ಮಿಮೀ, ಹಾಲಾಪುರ- 16ಮಿಮೀ, ಕುರ್ಡಿ- 17ಮಿಮೀ ಮಳೆಯಾಗಿದೆ.
ಸಿಂಧನೂರನಲ್ಲಿ 35.2ಮಿಮೀ, ಜವಳಗೇರಾ-39.4ಮಿಮೀ, ಸಾಲಗುಂದಾ-27.4 ಮಿಮೀ, ಗುಡದೂರು-24.3ಮಿಮೀ, ತುರ್ವಿಹಾಳ- 8ಮಿಮೀ, ವಲ್ಕಂದಿನ್ನಿ- 31.2ಮಿಮೀ, ಗುಂಜಳ್ಳಿ- 12 ಮಿಮೀ, ಜಾಲಿಹಾಳ- 3.4ಮಿಮೀ, ಹೆಡಗಿನಾಳ- 12.8ಮಿಮೀ ಮಳೆಯಾಗಿದೆ.
ಲಿಂಗಸ್ಗೂರು ಪಟ್ಟಣದಲ್ಲಿ 8ಮಿಮೀ, ಮುದಗಲ್ನಲ್ಲಿ 17ಮಿಮೀ ಮಳೆಯಾಗಿದೆ. ದೇವದುರ್ಗದಲ್ಲಿ 51.6 ಮಿಮೀ, ಅದೇ ತಾಲೂಕಿನ ಅರಕೇರಾ-57.8ಮಿಮೀ, ಗಲಗ-18.2ಮಿಮೀ, ಗಬ್ಬೂರು- 10ಮಿಮೀ ಮತ್ತು ಜಾಲಹಳ್ಳಿಯಲ್ಲಿ 34 ಮಿಮೀ ಮಳೆಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement