ಜೂ.7ರಂದು ವಕೀಲರ ಸಂಘದ ಚುನಾವಣೆ
ಸಿಂಧನೂರು: ಸಿಂಧನೂರು ವಕೀಲರ ಸಂಘದ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿಗಳ ಚುನಾವಣೆ ಜೂನ್ 7ರಂದು ನಿಗದಿಯಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಮೂವರು, ಕಾರ್ಯದರ್ಶಿ ಸ್ಥಾನಕ್ಕೆ ಐವರು ಖಜಾಂಚಿ ಸ್ಥಾನಕ್ಕೆ ಒಬ್ಬರೆ ಸ್ಪರ್ಧಿಸಿದ್ದಾರೆ. ಎಲ್ಲರ ನಾಮಪತ್ರಗಳು ಅಂಗೀಕಾರವಾಗಿವೆ ಎಂದು ಚುನಾವಣಾ ಅಧಿಕಾರಿ ವಿರುಪಾಕ್ಷಪ್ಪ ಗದ್ರಟಗಿ ತಿಳಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಕೆ.ಶರಣಬಸವ, ಕೆ.ಭೀಮನಗೌಡ, ಮುತ್ಯಾಲರಾವ್ ನಾಮಪತ್ರ ಸಲ್ಲಿಸಿದ್ದಾರೆ. ಕಾರ್ಯದರ್ಶಿ ಸ್ಥಾನಕ್ಕೆ ಪಾಲಾಕ್ಷಶಾಸ್ತ್ರಿ, ಖಾಜಿ ಮಲಿಕ್ ಅಹ್ಮದ, ವಿಜಯಪ್ಪ ಅರಳಹಳ್ಳಿ, ಸೋಮಲಿಂಗಪ್ಪ, ಹನುಮೇಶ ಕೊಡ್ಲಿ ಸ್ಪರ್ಧಿಸಿದ್ದಾರೆ. ಖಜಾಂಚಿ ಸ್ಥಾನಕ್ಕೆ ಸುರೇಶರೆಡ್ಡಿ ಚನ್ನಳ್ಳಿ ಒಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವರ ನಾಮಪತ್ರ ಅಂಗೀಕಾರಗೊಂಡಿದ್ದು, ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರಗಳ ಹಿಂತೆಗೆದ ನಂತರ ಅವಶ್ಯಕತೆ ಇದ್ದ ಸ್ಥಾನಗಳಿಗೆ ಜೂನ್ 7ರಂದು ಚುನಾವಣೆ ನಡೆಸಲಾಗುವುದೆಂದು ತಿಳಿಸಿದ್ದಾರೆ.
ವಸತಿ ನಿಲಯಕ್ಕೆ ಅರ್ಜಿ ಆಹ್ವಾನ
ಸಿಂಧನೂರು: 2013-14ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ಮತ್ತು ಬಾಲಕಿಯರ ವಸತಿ ನಿಲಯಗಳಲ್ಲಿ ತೆರವಾದ ಸ್ಥಾನಗಳಿಗೆ ಹೊಸ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ. ಜೂನ್ 10ರ ಒಳಗಾಗಿ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ದೃಢಿಕೃತ ಶಾಲಾ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ವಾಸಸ್ಥಳ ಪ್ರಮಾಣಪತ್ರಗಳೊಂದಿಗೆ ಅಜರ್ ಸಲ್ಲಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿಗಳು ತಿಳಿಸಿದ್ದಾರೆ.