ದುರ್ಗಾದೇವಿ ಜಾತ್ರೆ ಸಂಪನ್ನ
ಮುದಗಲ್: ಪಟ್ಟಣ ಸಮೀಪದ ಕನ್ನಾಪುರಹಟ್ಟಿಯಲ್ಲಿ ಗ್ರಾಮದೇವತೆ ದುರ್ಗಾದೇವಿ ಜಾತ್ರೆ ಮಹೋತ್ಸವ ಬುಧವಾರ ಸಂಭ್ರಮದಿಂದ ಜರುಗಿತು. ಈ ಜಾತ್ರಾ ಮಹೋತ್ಸವವನ್ನು ಮೂರು ವರ್ಷಕ್ಕೊಮ್ಮೆ ಆಚರಿಸಲಾಗುತ್ತದೆ.
ಅಂದು ಬೆಳಗ್ಗೆ ಗ್ರಾಮದೇವಿಗೆ ಮಜ್ಜನಾಭಿಷೇಕ, ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು. ನಂತರ ಪೂಜಾರಿಗಳಿಂದ ಅಕ್ಕಿ ಪಾಯಸ ನೈವೇದ್ಯ ಮತ್ತು ಅಗ್ನಿಕೊಂಡ ಪ್ರವೇಶ ಮಾಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯ ಆದಪ್ಪ ಜಾಲಿಹಾಳ, ಮುಖಂಡರಾದ ಪರಮಣ್ಣ ಹೆಬ್ಬಾಳ, ಹುಲಗಪ್ಪ ಪೂಜಾರಿ, ವಿನೋದ, ದುರಗಪ್ಪ, ಪರಮೇಶ ಗೊರ್, ಹನುಮಂತ, ಲಕ್ಷ್ಮಣ್ಣ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.