ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಂತ್ರಾಲಯ: ನಾಳೆ ನೂತನ ಶ್ರೀ ಪುರಪ್ರವೇಶ

Vishwanath S
Updated On : 31 May 2013, 12:02 pm

ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಸುಯತೀಂದ್ರ ತೀರ್ಥರ ಉತ್ತರಾಧಿಕಾರಿಗಳಾಗಿ ಈಚೇಗೆ ನೇಮಕಗೊಂಡಿರುವ ಸುಬುಧೇಂದ್ರ ತೀರ್ಥರು ಜೂ.1ರಂದು ಮಂತ್ರಾಲಯ ಪುರಪ್ರವೇಶ ಕೈಗೊಳ್ಳಲಿದ್ದಾರೆಂದು ಮಠ ತಿಳಿಸಿದೆ. ಜೂ.1 ರಂದು ಸಂಜೆ 4ಕ್ಕೆ ಬೈಕ್ ರ್ಯಾಲಿಯಲ್ಲಿ ಶ್ರೀಗಳನ್ನು ಮಂತ್ರಾಲಯಕ್ಕೆ ಕರೆತರುವ ಕಾರ್ಯಕ್ರಮ ಆಯೋಜಿಸಿದ್ದು, ಮಾಧವರಂನ ತುಂಗಭದ್ರಾ ಹೊಸ ಸೇತುವೆಯಿಂದ ಈ ರ್ಯಾಲಿ ನಡೆಯಲಿದೆ. ಸಂಜೆ 5.30ಕ್ಕೆ ಮಂತ್ರಾಲಯದಲ್ಲಿ ಶ್ರೀಗಳ ಮೆರವಣಿಗೆಯ ಮೂಲಕ ಬರ ಮಾಡಿಕೊಳ್ಳಲಾಗುತ್ತದೆ. ಅದೇ ದಿನ ಸಂಜೆ 7ಕ್ಕೆ ಗುರುವಂದನ ಕಾರ್ಯಕ್ರಮವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement