ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಂದೀಶ ಸಿದ್ಧಾಂತಿಮಠಗೆ ಶೇ.98 ಅಂಕ

Lingaraj Badiger
Updated On : 1 Jun 2013, 11:14 am

ಸಿಂಧನೂರು: ಎಸ್ಎಸ್ಎಲ್ಸಿ, ಸಿಬಿಎಸ್ಇ ಪಠ್ಯಕ್ರಮದ ಪರೀಕ್ಷೆಯಲ್ಲಿ ನಂದೀಶ ತಂದೆ ಬಸವರಾಜ ಸಿದ್ದಾಂತಿಮಠ ಶೇ.98 ಅಂಕಗಳನ್ನು ಗಳಿಸುವ ಮೂಲಕ ಅತ್ಯುತ್ತಮ ಶ್ರೇಣಿಯಲ್ಲಿ ಪಾಸಾಗಿದ್ದಾನೆ.
ನಂದೀಶ್ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಜಯಪುರ ಗ್ರಾಮದ ಸತ್ಯಸಾಯಿ ಜ್ಯೋತಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯ ಸಾಧನೆಗೆ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಬಾರದ ಪ್ರಶ್ನೆ ಪತ್ರಿಕೆ; ಆತಂಕ
ಸಿಂಧನೂರು: ಗುಲ್ಬರ್ಗ ವಿಶ್ವವಿದ್ಯಾಲಯದ ಪರೀಕ್ಷೆ ವಿಭಾಗದವರ ನಿರ್ಲಕ್ಷತೆಯಿಂದ ಸಮಯಕ್ಕೆ ಸರಿಯಾಗಿ ಪ್ರಶ್ನೆ ಪತ್ರಿಕೆಗಳು ಬಾರದಿದ್ದರಿಂದ ಸ್ಥಳೀಯ ಬಿಬಿಎಂ ಕಾಲೇಜು ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸಿ ಆತಂಕಪಟ್ಟ ಘಟನೆ ನಡೆಯಿತು.
ಬಿಬಿಎಂ ತರಗತಿಯ ಕನ್ನಡ ವಿಷಯದ ಪರೀಕ್ಷೆ ಬೆಳಗಿನ 9 ಗಂಟೆಗೆ ನಡೆಯಬೇಕಾಗಿತ್ತು. ಆದರೆ ಬೆಳಗಿನ 10 ಗಂಟೆಯಾದರೂ ಪ್ರಶ್ನೆ ಪತ್ರಿಕೆಗಳು ಕಾಲೇಜುಗಳಿಗೆ ಬಾರದಿರುವುದಕ್ಕೆ ಕಾಲೇಜು ಪ್ರಾಚಾರ್ಯರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ತೀವ್ರ ಆತಂಕಕ್ಕೊಳಗಾದರು. ಸಂಕೇತ, ಶಂಕರ ಟ್ರಸ್ಟ, ಕನಕದಾಸ, ಸರ್ಕಾರಿ ಪದವಿ ಕಾಲೇಜುಗಳಿಗೆ ಪರೀಕ್ಷೆ ಬರೆಯಲು ಹೋಗಿದ್ದ ವಿದ್ಯಾರ್ಥಿಗಳು ಗಲಿಬಿಲಿಗೊಂಡರು. ನಂತರ ಪರೀಕ್ಷೆಗಳು ಸುಸೂತ್ರವಾಗಿ ನಡೆದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement