ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಿವೇಶನ ಹಂಚಿಕೆ ಆದೇಶ ರದ್ದತಿಗೆ ಆಗ್ರಹ

Lingaraj Badiger
Updated On : 1 Jun 2013, 11:14 am

ಕನ್ನಡಪ್ರಭ ವಾರ್ತೆ, ರಾಯಚೂರು, ಮೇ 31
ಮಾನವಿ ಪಟ್ಟಣದ ಕೈಗಾರಿಕೆ ಪ್ರದೇಶದಲ್ಲಿ ಒಂದೇ ಕುಟುಂಬಕ್ಕೆ ಒಂದಕ್ಕಿಂತ ಹೆಚ್ಚಿನ ನಿವೇಶನ ಮಂಜೂರು ಮಾಡಿದ ಕ್ರಮವನ್ನು ಖಂಡಿಸಿ ಹಾಗೂ ಈ ಆದೇಶ ರದ್ದತಿಗೆ ಜಯ ಕರ್ನಾಟಕ ಸಂಘಟನೆ ಆಗ್ರಹಿಸಿದೆ.
ಈ ಕುರಿತು ಈಚೆಗೆ ಕೆಐಎಡಿಬಿ ಇಲಾಖೆಯ ಉಪಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಂಘಟನೆಯ ಕಾರ್ಯಕರ್ತರು, ಮಾನವಿ ಪಟ್ಟಣದ ಕೈಗಾರಿಕೆ ಪ್ರದೇಶದಲ್ಲಿ ಒಟ್ಟು 112 ನಿವೇಶನಗಳ ಪೈಕಿ 51 ನಿವೇಶನಗಳನ್ನು ಮಂಜೂರು ಮಾಡಲಾಗಿದೆ. ಇನ್ನುಳಿದ ನಿವೇಶನಗಳ ಹಂಚಿಕೆಯಲ್ಲಿ ಒಂದೇ ಕುಟುಂಬದವರಿಗೆ ಪುನಾ ಹಂಚಿಕೆ ಮಾಡಬಹುದೆಂದು ಜಿಲ್ಲಾ ಕೈಗಾರಿಕೆಯ ಜಂಟಿ ನಿರ್ದೇಶಕರು ಆದೇಶಿಸಿರುವುದು ಸರಿಯಲ್ಲ ಎಂದು ಆರೋಪಿಸಿದರು.
ನಿವೇಶನಗಳನ್ನು ಈಗಾಗಲೇ ಹಂಚಿಕೆ ಮಾಡಿದವರಿಗೆ ಪುನಾ ನಿವೇಶನ ನೀಡುವ ಕ್ರಮದಿಂದ ಅನೇಕ ಅರ್ಹ ಪ.ಜಾ., ಪಂಗಡದವರು ನಿವೇಶನ ವಂಚಿತರಾಗುತ್ತಾರೆ. ಪ.ಜಾ. ಮತ್ತು ಪಂಗಡದವರು ನಿವೇಶನಕ್ಕೆ ಅರ್ಜಿ ಸಲ್ಲಿಸಿದರೆ, ಜಂಟಿ ನಿರ್ದೇಶಕರು ಸ್ವೀಕರಿಸುತ್ತಿಲ್ಲ. ಈ ನಿಟ್ಟಿನಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಘಟನೆಯ ಕಾರ್ಯಕರ್ತರು ಮನವಿ ಮಾಡಿದರು.
ಸರ್ಕಾರದ ನಿಯಮದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನಿವೇಶನ ಮೀಸಲಿಡಬೇಕು. ನಿವೇಶನ ಪುನಾ ಒಂದೇ ಕುಟುಂಬಕ್ಕೆ ಹಂಚಿಕೆ ಮಾಡದಂತೆ ತಡೆಯಬೇಕು. ಈ ಬೇಡಿಕೆ ಈಡೇರಿಸದಿದ್ದಲ್ಲಿ ಕೆಐಎಡಿಬಿ ಕಚೇರಿ ಎದುರು ಧರಣಿ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement