ಹೈ- ಕ ಅಭಿವೃದ್ಧಿ ಕರಡು ವರದಿ ಸಿದ್ಧಪಡಿಸಲು ಸಿಎಂ ಸೂಚನೆ
ಕನ್ನಡಪ್ರಭ ವಾರ್ತೆ, ಬೆಂಗಳೂರು, ಮೇ 31
ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಸಮಗ್ರ ಅಭಿವೃದ್ಧಿಗಾಗಿ 371 ಜೆ ವಿಧಿ ಜಾರಿಗಾಗಿ ಮೂರು ದಿನದಲ್ಲಿ ಕರಡು ವರದಿ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
371ಜೆ ವಿಧಿ ಜಾರಿ ಬಗ್ಗೆ ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಪ್ರಾಥಮಿಕ ಸಭೆ ಶುಕ್ರವಾರ ನಡೆಯಿತು. ಇದು ಇನ್ನೂ ಪ್ರಥಮ ಹಂತದ ಸಭೆಯಾಗಿದ್ದು ಬುಧವಾರ ಅಥವಾ ಗುರುವಾರ ಮತ್ತೊಂದು ಸುತ್ತಿನ ಸಭೆ ನಡೆಸಲಾಗುತ್ತದೆ. ಇಂದು ನಡೆಸಿದ ಸಭೆಯಲ್ಲಿ ಮೂರು ದಿನಗಳಲ್ಲಿ ವಿಧಿ ಜಾರಿ ಬಗ್ಗೆ ಕರಡು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದರು.
ಹೈದರಾಬಾದ್-ಕರ್ನಾಟಕ ಭಾಗದ ಅಭಿವೃದ್ಧಿಯ ಪ್ರಕ್ರಿಯೆ ಸಂಪೂರ್ಣವಾಗಿ ಪೂರ್ಣಗೊಳಿಸಿ, ಇನ್ನೊಂದು ತಿಂಗಳಲ್ಲಿ ಅದರ ಅನುಷ್ಠಾನವನ್ನು ಆರಂಭಿಸಲಾಗುವುದು ಎಂದು ಹೇಳಿದರು.
--