ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ದೀಪಾವಳಿ ಹಬ್ಬದ ಸಡಗರ: ಕಾಯಿಪಲ್ಯೆ, ಹೂವಿನ ಬೆಲೆ ಗಗನಕ್ಕೆ

Vishwanath S
Updated On : 4 Nov 2013, 12:05 pm

ಸಿಂಧನೂರು: ತಾಲೂಕಾದ್ಯಂತ ದೀಪಾವಳಿ ಹಬ್ಬ ಸಂಭ್ರಮ, ಸಡಗರದಿಂದ ನಡೆಯುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಕಾಯಿಪಲ್ಯೆ ಸೇರಿದಂತೆ ಬಾಳೆದಿಂಡು, ಮಾವಿನ ಎಲೆ, ಹೂವುಗಳ ಬೆಲೆ ಗಗನಕ್ಕೇರಿದ್ದರಿಂದ ಎಲ್ಲರಿಗೂ ಬೆಲೆ ಏರಿಕೆಯ ಬಿಸಿ ತಟ್ಟಿದೆ.
  ನೀರು ತುಂಬುವ ಹಬ್ಬ, ಶನಿವಾರ ನರಕ ಚತುರ್ದಶಿ, ಭಾನುವಾರ ಅಮವಾಸ್ಯೆ ಲಕ್ಷ್ಮೀಪೂಜೆಗಳು ನಡೆಯುತ್ತಿವೆ. ವಿಶೇಷವಾಗಿ ಲಕ್ಷ್ಮೀಪೂಜೆ ನಗರ ಸೇರಿದಂತೆ ತಾಲೂಕಾದ್ಯಂತ ಎಲ್ಲಾ ಅಂಗಡಿ ಮುಗ್ಗಟ್ಟುಗಳಲ್ಲಿ ವ್ಯಾಪಾರಸ್ಥರು ತಮ್ಮ ತಮ್ಮ ಅಂಗಡಿಗಳಲ್ಲಿ ಆಚರಿಸುತ್ತಿದ್ದಾರೆ. ದೀಪಾವಳಿ ಹಬ್ಬ ಮಕ್ಕಳಿಂದ ಮುದುಕರವರೆಗೆ ಖುಷಿ ನೀಡುವ ಹಬ್ಬವಾಗಿದ್ದು, ಮಕ್ಕಳು ಪಟಾಕಿ ಸಿಡಿಸುವ ಸಂಭ್ರಮದಲ್ಲಿದ್ದಾರೆ. ಹೊಸದಾಗಿ ಮದುವೆಯಾದವರಿಗೆ ನೂತನ ಅಳಿಯನನ್ನು ಕರೆಯಿಸಿಕೊಂಡು ಹೊಸಬಟ್ಟೆ ನೀಡಿ ಸಂತಸಪಡುತ್ತಿದ್ದಾರೆ. ಇನ್ನು ಅಕ್ಕ ತಂಗಿಯವರಿಗೆ, ಅಣ್ಣ ತಮ್ಮಂದಿರಿಗೆ ನರಕ ಚತುರ್ದಶಿ ಎಂದು ವಿಜಯದಾರತಿ ಮಾಡಿ ಖುಷಿಪಡುವುದು ಸಾಮಾನ್ಯವಾಗಿದೆ. ಎಲ್ಲರ ಮನೆಯ ಮುಂದುಗಡೆ ಆಕಾಶಬುಟ್ಟಿಗಳು, ಹಣತೆಗಳು ರಾರಾಜಿಸುತ್ತಿವೆ. ಸೋಮವಾರ ಬಲಿಪಾಡ್ಯ ಇದ್ದು, ಅದರ ಸಿದ್ಧತೆಗಾಗಿ ಹೂವು, ಹಣ್ಣು, ಬಾಳೆದಿಂಡುಗಳನ್ನು ಖರೀದಿಸುವ ಸಂಭ್ರಮದಲ್ಲಿ ನಾಗರಿಕರು ತೊಡಗಿದ್ದಾರೆ. ಎಲ್ಲಾ ವ್ಯಾಪಾರಸ್ಥರಿಗೆ ವ್ಯಾಪಾರದ ಖುಷಿಯಲ್ಲಿ ಇದ್ದಾರೆ. ಆದರೆ ಗ್ರಾಹಕರಿಗೆ ಮಾತ್ರ ಬೆಲೆ ಏರಿಕೆಯ ಬಿಸಿ ಹಾಗೂ ನಗರದಲ್ಲಿ ಧೂಳಿನಿಂದಾಗಿ ಜನ ಬೇಸತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿರುವುದು ಕಂಡು ಬಂತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement