ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಾಪನಯ್ಯದೊಡ್ಡಿ ಸ್ವಾಧೀನಕ್ಕೆ ಯುವಕ ಸಂಘ ಒತ್ತಾಯ

Vishwanath S
Updated On : 4 Nov 2013, 12:05 pm

ರಾಯಚೂರು: ಹರಿಜನವಾಡ ಪ್ರದೇಶದ ನಿವಾಸಿಗಳಿಗೆ ಶೌಚಾಲಯ ನಿರ್ಮಿಸಲು ಬಾಪನಯ್ಯದೊಡ್ಡಿ ಸ್ವಾಧೀನ ಪಡಿಸಿಕೊಳ್ಳುವಂತೆ ನವರತ್ನ ಯುವಕ ಸಂಘ ಒತ್ತಾಯಿಸಿದೆ.
  ಈ ಕುರಿತು ಈಚೆಗೆ ನಗರಸಭೆ ಅಧ್ಯಕ್ಷರಿಗೆ ಮನವಿ ಸಲ್ಲಿಸಿರುವ ಸಂಘದ ಪದಾಧಿಕಾರಿಗಳು, ಕಳೆದ 50-6- ವರ್ಷಗಳಿಂದ ಹರಿಜನವಾಡದ ನಿವಾಸಿಗಳು ಶೌಚಕ್ಕೆ ಉಪಯೋಗಿಸುತ್ತಿರುವ ಇಲ್ಲಿನ ಬಾಪನಯ್ಯದೊಡ್ಡಿ ಪ್ರದೇಶದಲ್ಲಿ ಶೌಚಾಲಯ ಸೌಲಭ್ಯ ಕಲ್ಪಿಸುವಂತೆ ಕಳೆದ ಅನೇಕ ವರ್ಷಗಳಿಂದ ನಿವಾಸಿಗಳು ಹೋರಾಟ ನಡೆಸಿದ್ದಾರೆಂದು ತಿಳಿಸಿದರು.
  ಬಾಪನಯ್ಯದೊಡ್ಡಿ ಪ್ರದೇಶದ 1ಎಕರೆ 30 ಗುಂಟೆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲು ಈ ಹಿಂದೆ ಪ್ರಕ್ರಿಯೆ ಆರಂಭ ಗೊಂಡಿತ್ತು. ಆದರೆ ನಗರಸಭೆಯಿಂದ ಸಮರ್ಪಕ ದಾಖಲೆ ನೀಡದ್ದರಿಂದ ಪ್ರಕ್ರಿಯೆಗೆ ಹಿನ್ನಡೆಯಾಗಿದೆ. ಈ ಹಿಂದೆ ಅಧಿಕಾರದಲ್ಲಿದ್ದ ನಗರಸಭೆಯ ಆಡಳಿತದವರು ಬಾಪನಯ್ಯದೊಡ್ಡಿ ಮಾಲಿಕರೊಂದಿಗೆ ಮಾತುಕತೆ ನಡೆಸಿದ್ದರೂ ಸ್ವಾಧೀನ ಪ್ರಕ್ರಿಯೆ ವೈಫಲ್ಯದಿಂದ ನಿವಾಸಿಗಳು ಶೌಚಾಲಯವಿಲ್ಲದೇ ಪರದಾಡುವಂತಾಗಿದೆ ಎಂದು ದೂರಿದರು.
  ಬಾಪನಯ್ಯದೊಡ್ಡಿ ಪ್ರದೇಶದ ಮಾಲೀಕರು 2.31 ಕೋಟಿ ನಗರಸಭೆಗೆ 1.31 ಎಕರೆ ಪ್ರದೇಶ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಕಳೆದ 10 ತಿಂಗಳ ಹಿಂದೆಯೇ ಒಪ್ಪಿಗೆ ಪತ್ರ ಸಲ್ಲಿಸಿದ್ದರೂ, ನಗರಸಭೆ ಆಡಳಿತ ನಿರ್ಲಕ್ಷ್ಯ ವಹಿಸಿದೆ. ಕಾರಣ ಕೂಡಲೇ ನಗರಸಭೆಯ ನೂತನ ಆಡಳಿತವು ಹರಿಜನವಾಡ ನಿವಾಸಿಗಳಿಗೆ ಶೌಚಾಲಯ ನಿರ್ಮಿಸಿಕೊಡಲು ಮುಂದಾಗಬೇಕೆಂದು ನವರತ್ನ ಯುವಕ ಸಂಘ ಒತ್ತಾಯಿಸಿದೆ.
  ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಸ್.  ಹುಲಿಗೆಪ್ಪ, ಕೆ.ಪಿ.ಅನಿಲಕುಮಾರ್, ವೆಂಕಟೇಶ್, ಅಂಜನಯ್ಯ, ಜನಾರ್ದನ ಹಳ್ಳಿಬೆಂಚಿ, ಶರಣಪ್ಪ, ಚಂದ್ರುಭಂಡಾರಿ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement