ದೇಗುಲ ಜೀಣೋದ್ಧ್ಧಾರಕ್ಕೆ ನಿರ್ಧಾರ
ಮುದಗಲ್: ಪಟ್ಟಣದ ಹಳೇಪೇಟೆ ಚಾವಡಿಕಟ್ಟೆ ರಸ್ತೆಗೆ ಹೊಂದಿಕೊಂಡಿರುವ ಕುಂಬಾರಪೆಟೆಯ ಬಸವೇಶ್ವರ ದೇವಸ್ಥಾನದ ಜೀಣೋಧ್ಧಾರ ಕಾರ್ಯಕ್ಕೆ ಸೋಮುವಾರ ಪೂಜೆ ನೆರವೇರಿಸುವದರ ಮೂಲಕ ಚಾಲನೆ ನೀಡಲಾಯಿತು. ಪ.ಪಂ. ಅಧ್ಯಕ್ಷ ರಜ್ಜಬ್ ಅಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದರು.
ರುದ್ರಯ್ಯಸ್ವಾಮಿ ಶೀಲವಂತಮಠ, ಸಿದ್ದಯ್ಯ ಸ್ವಾಮಿ ಸಾಲಿಮಠ, ವೀರಭದ್ರಯ್ಯ ಸ್ವಾಮಿ ಮೂಲಿಮನಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಕಟ್ಟಡವು ಹಲವು ದಿನಗಳ ಹಿಂದೆಯೇ ಶಿಥಿಲಾವಸ್ಥೆಗೆ ತಲುಪಿದ್ದು ಕುಂಬಾರಪೇಟೆ ನಿವಾಸಿಗಳು ಸಮಿತಿ ರಚಿಸಿಕೊಂಡು ದೇವಸ್ಥಾನದ ಜೀಣೋಧ್ಧಾರಕ್ಕೆ ಮುಂದಾಗಿದ್ದಾರೆಂದು ಬಸ್ವೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಮಾಟುರು ಪತ್ರಿಕೆಗೆ ತಿಳಿಸಿದರು.
ಹಾಗೆಯೇ ಮುಂದಿನ ದಿನಗಳಲ್ಲಿ ನಡೆಯುವ ಹಾಲಭಾವಿ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸಮಾಜದ ಬಂಧುಗಳೊಂದಿಗೆ ಸಮಾಲೋಚನೆ ನಡೆಸಿದರು.
ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಹೇಮಂತ ನಾಗಲಾಪೂರ, ಪ.ಪಂ. ಸದಸ್ಯ ವೀರೇಶ್ ವಡ್ಡರ್, ಸಮಾಜದ ಬಂಧುಗಳಾದ ಅಮರಪ್ಪ ಸಂಗನಾಳ, ಶಿವಾನಂದ ಸುಂಕದ, ರಾಮಣ್ಣ ಚಿತ್ರಗಾರ, ಷಣ್ಮುಖಪ್ಪ ಖೇಣೆದ್, ಚನ್ನಪ್ಪ ಗದ್ದಿ, ಅಮರೇಶಪ್ಪ ತಲೇಖಾನ್, ಭವಾನಿಸಿಂಗ್ನ್‌ಗಾರಿ, ಮಹಾಂತೇಶ ಗದ್ದಿ, ಮುತ್ತು ಬಳಿಗಾರ್, ಶರಣಪ್ಪ ಕುಂಬಾರ ಸೇರಿದಂತೆ ನೂರಾರು ಸಮಾಜದ ಬಂಧುಗಳಿದ್ದರು.