ವಿವಿಧೆಡೆ ಸಂಭ್ರಮದ ರಾಜ್ಯೋತ್ಸವ
ರಾಯಚೂರು: ನಗರದ ಅಖಿಲ ಕರ್ನಾಟಕ ಭುವನೇಶ್ವರಿ ಸೇನಾ ಸಮಿತಿಯಿಂದ ಈಚೆಗೆ ಕನ್ನಡ ರಾಜ್ಯೋತ್ಸವ ಸಮಾರಂಭ ಆಯೋಜಿಸಲಾಗಿತ್ತು.
ಇಲ್ಲಿನ ಹರಿಜನವಾಡ ಪ್ರದೇಶದ ಕಂಚು ಮಾರೆಮ್ಮ ದೇವಸ್ಥಾನದ ವೃತ್ತದಲ್ಲಿ ಕನ್ನಡ ಧ್ವಜಾರೋಹಣವನ್ನು ನಗರಸಭೆ ಮಾಜಿ ಸದಸ್ಯ ತಿಮ್ಮಪ್ಪ ಧ್ವಜಾರೋಹಣ ನೆರವೇರಿಸಿದರು. ಸಮಿತಿ ಜಿಲ್ಲಾಧ್ಯಕ್ಷ ತಮ್ಮೇಶ್ ಸೇರಿ ಬೋಳಬಂಡಿ, ವಾಗಲು ನರಸಪ್ಪ, ನರಸಿಂಹಲು, ಸಿದ್ರಾಮಪ್ಪ ಕಮಲಪುರ ಸೇರಿ ಅನೇಕ ಪದಾಧಿಕಾರಿಗಳಿದ್ದರು.
ಉಚಿತ ಲಸಿಕೆ: ದೇವದುರ್ಗ ತಾಲೂಕಿನ ಎನ್. ಗಣೇಕಲ್ ಗ್ರಾಮದಲ್ಲಿ ಈಚೆಗೆ ಕನ್ನಡ ರಾಜ್ಯೋತ್ಸವ ಸಂದರ್ಭ ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕದಿಂದ ಜಾನುವಾರುಗಳಿಗೆ ಕಾಲುಬಾಯಿ ರೋಗಬಾರದಂತೆ ತಡೆಯಲು ಉಚಿತವಾಗಿ ಲಸಿಕೆ ನೀಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಘಟನೆಯ ಅಧ್ಯಕ್ಷ ಹಾಗೂ ರಾಮದುರ್ಗದ ಬೈಫ್ ಗ್ರಾಮೀಣಾಭಿವೃದ್ಧಿ ಕೇಂದ್ರದಡಾ. ಗಂಗಪ್ಪ ಬಾಗಲಿ, ಕಾರ್ಯದರ್ಶಿ ರಾಘವೇಂದ್ರ ಬಾಗಲಿ, ಪದಾಧಿಕಾರಿಗಳಾದ ಚೆನ್ನಪ್ಪ ಬಾಗಲಿ, ಮಹಾಂತೇಶ ಕುರಕಳ್ಳಿ, ಶರಣಬಸವ ಸೇರಿ ಅನೇಕರಿದ್ದರು.
ಉಡುಮಗಲ್ ಖಾನಾಪುರ: ತಾಲೂಕಿನ ಉಡುಮಗಲ್ ಖಾನಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಶಾಲೆಯ ಭೂದಾನಿ ನರಸಿಂಹನಾಯಕ ಅವರು ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರು ಬಂದೋಲಿ ವಹಿಸಿ ಮಾತನಾಡಿದರು. ಕನ್ನಡ ರಾಜ್ಯೋತ್ಸವ ಕುರಿತು ಶಾಲೆಯ ಶಿಕ್ಷಕಿ ಲಕ್ಷ್ಮಿದೇವಿ ಮಾತನಾಡಿದರು.
ಗ್ರಾಮದ ಪ್ರಮುಖರಾದ ತಾಯಪ್ಪ, ಹನುಮಯ್ಯ ನಾಯಕ, ಶಿಕ್ಷಕ ಖಾಜಾಹುಸೇನ್, ಭಾಗ್ಯಲಕ್ಷ್ಮಿ, ರವಿ ಸೇರಿದಂತೆ ಶಾಲೆಯ ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳಿದ್ದರು.
ವಂದೇಮಾತರಂ ಯುವಕ ಸಂಘ: ಮಾನವಿ ತಾಲೂಕಿನ ಸಿರವಾರದಲ್ಲಿ ವಂದೇಮಾತರಂ ಯುವಕ ಸಂಘ ಹಾಗೂ ಶಂಕರನಾಗ್ ಯುವಕ ಸಂಘದಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಿರವಾರದ ಇಂದಿರಾ ನಗರದದಲ್ಲಿ ಧ್ವಜಾರೋಹಣವನ್ನು ಶಂಕರನಾಗ್ ಯುವಕ ಸಂಘದ ಅಧ್ಯಕ್ಷ ರಂಗಣ್ಣ ಬೋವಿ ನೆರವೇರಿಸಿದರು. ಅಧ್ಯಕ್ಷತೆಯನ್ನು ವಂದೇಮಾತರಂ ಯುವಕ ಸಂಘದ ಅಧ್ಯಕ್ಷ ಮಹಿಬೂಬ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ರವಿ ನಾಯಕ, ಮೌನೇಶ ನಾಯಕ, ಶಶಿಕುಮಾರ್, ಕೃಷ್ಣಾ ನಾಯಕ, ಮಲ್ಲೇಶ್, ರಾಮು ಕೋಲಿಮಿ ಸೇರಿ ಅನೇಕರಿದ್ದರು.