ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಶರಣರ ತತ್ವ ಪಾಲನೆಯಿಂದ ಜೀವನ ಪಾವನ: ಗಜದಂಡಶ್ರೀ

Lingaraj Badiger
Updated On : 5 Nov 2013, 11:36 am

ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ನ.4
ಸಮಾಜ ಸುಧಾರಣೆಗಾಗಿ ತಮ್ಮ ಜೀವನ ಸವೆಸಿದ ಶರಣರ ತತ್ವಾದರ್ಶಗಳ ಪಾಲನೆಯಿಂದ ಮನುಷ್ಯನ ಜೀವನ ಪಾವನವಾಗಲಿದೆ ಎಂದು ದೇವರಭೂಪೂರ ಬ್ರಹನ್ಮಠದ ಅಮರೇಶ್ವರ ಅಭಿನವಗುರು ಗಜದಂಡಶ್ರೀ ನುಡಿದರು.
ತಾಲೂಕಿನ ಯರಡೋಣಿ ಗ್ರಾಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಲ್ಬುರ್ಗಿಯ ಮಹಾದಾಸೋಹಿ ಶರಣಬಸವೇಶ್ವರ ಪುರಾಣ ಮಹಾಮಂಗಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.
ಭೂಮಿಯ ಮೇಲೆ ಹುಟ್ಟಿದ ಮನುಷ್ಯ ಸಮಯ ಪ್ರಜ್ಞೆಯ ಮಹತ್ವ ಅರಿತು ಪರೋಪಕಾರದಲ್ಲಿ ತೊಡಬೇಕು. ಸಂಸಾರಿಕ ಜೀವನದಲ್ಲಿ ಏನೇ ಸಂಕಷ್ಟಗಳಿದ್ದರೂ ಭಗವಂತನ ನಾಮಸ್ಮರಣೆ ಜೊತೆಗೆ ಶರಣರ ತತ್ವಾದರ್ಶಗಳ ಪಾಲನೆ ಮಾಡಬೇಕು. ಇದರಿಂದ ಜೀವನ ಪಾವನವಾಗಲಿದೆ ಎಂದರು.
ಯರಡೋಣಿ ಗುರುಮಠದ ಮುರುಘೇಂದ್ರ ಶ್ರೀ ಮಾತನಾಡಿ, ಮನುಷ್ಯನಿಗೆ ಆಧ್ಯಾತ್ಮದ ಅರಿವಿನಿಂದ ಮನಶಾಂತಿ ಮತ್ತು ಆತ್ಮತೃಪ್ತಿ ಹೊಂದಲು ಸಾಧ್ಯವಾಗಲಿದೆ. ಸಂತೋಷದ ಜೀವನಕ್ಕೆ ಶರಣರ ತತ್ವಾದರ್ಶ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪುರಾಣ ಪ್ರವಚನಕಾರ ವೇ. ಅಮರೇಶ್ವರ ಶಾಸ್ತ್ರಿ ಯರಡೋಣಿ, ಸಂಗೀತ ಮಹಾಂತೇಶ ಹಿರೇಮಠ ಗವಾಯಿ, ತಬಲಾ ವಾದಕ ಶರಣಕುಮಾರ ಹೂಗಾರ ಕವಿತಾಳ, ಗ್ರಾಮದ ಮುಖಂಡರಾದ ಸಿದ್ಧನಗೌಡ ಮಾಲಿಪಾಟೀಲ್, ವಿರುಪಾಕ್ಷಯ್ಯಸ್ವಾಮಿ, ಸೋಮನಗೌಡ, ಅಮರೇಶ ತಿಳಿ, ಅಂಬಣ್ಣ ಪಲ್ಲೇದ, ಗುಂಡಪ್ಪ ಗವಿ, ಬಸನಗೌಡ ಮಾಲಿಪಾಟೀಲ್, ಸಿದ್ಧು ಮಾನವಿ, ಶರಣಗೌಡ ಪೊಲೀಸ್ ಪಾಟೀಲ್ ಸೇರಿದಂತೆ ದೇವಸ್ಥಾನ ಮಂಡಳಿ ಸದಸ್ಯರು ಇದ್ದರು.
ಗ್ರಾಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಅ.21 ರಿಂದ ನ.4 ರವರೆಗೆ ಹಮ್ಮಿಕೊಂಡಿದ್ದ ಮಹಾದಾಸೋಹಿ ಶರಣಬಸವೇಶ್ವರ ಪುರಾಣ ಮಹಾಮಂಗಲ ಕಾರ್ಯಕ್ರಮದ ನಂತರ ಅಮರೇಶ್ವರ ಭಜನಾ ಮಂಡಳಿಯಿಂದ ಅಖಂಡ ಶಿವಭಜನೆ ಜರುಗಿತು. ನ.5ರಂದು ಬೆಳಗ್ಗೆ ವೀರಭದ್ರೇಶ್ವರ ಮೂರ್ತಿಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಗಂಗಾ ಪೂಜೆ ನಂತರ ದೇವರ ಪಲ್ಲಕ್ಕಿ ಸೇವೆ, ಪುರವಂತಿಗೆ ಸೇವೆ, ನಂದಿಕೋಲು ಕುಣಿತ ಹಾಗೂ 2011 ವೊಳದ ನೂಲಿನ ದಾರ ಎಳೆಯುವ ಕಾರ್ಯಕ್ರಮಗಳು ಜರುಗಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement