ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕರ್ತವ್ಯಕ್ಕೆ ಶಿಕ್ಷಕರು ಗೈರು: ಆರೋಪ

Lingaraj Badiger
Updated On : 6 Nov 2013, 10:56 am

ದೇವದುರ್ಗ: ತಾಲೂಕಿನ ಗೂಗಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸತತ ಗೈರು ಹಾಜರಾಗುತ್ತಿದ್ದಾರೆಂದು ಆರೋಪಿಸಿರುವ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಕೆ. ವಿರೇಶ್ ಶಿಕ್ಷಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
  ಈ ಕುರಿತು ಬಿಇಒಗೆ ದೂರು ನೀಡಿ, ಗೂಗಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಸುಜಾತಾ, ಕುಮಾರ್ ಅವರುಗಳು ಶಾಲೆ ಪ್ರಾರಂಭವಾದ ದಿನದಿಂದ ಈವರೆಗೆ ಸೇವೆಗೆ ಹಾಜರಾಗಿಲ್ಲ. ಅದೇ ರೀತಿ ಶಿಕ್ಷಕರಾದ ಅಂಬಿಕಾ ಮತ್ತು ಕೃಷ್ಣಪ್ಪ ಅವರೂ ಸರಿಯಾದ ಸಮಯಕ್ಕೆ ಶಾಲೆಗೆ ಹಾಜರಾಗುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದು, ಈ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಭು ವಿ. ತಿಪ್ಪಣ್ಣಗೌಡ, ಪ್ರಭು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement