ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಗಮನ ಸೆಳೆದ ಕಾಲೇಜಿನ ಯುವಜನೋತ್ಸವದ ನೃತ್ಯ

Lingaraj Badiger
Updated On : 6 Nov 2013, 10:55 am

ಕ.ಪ್ರ. ವಾರ್ತೆ, ಸಿಂಧನೂರು, ನ.5
ಸಿಂಧನೂರಿನ ದುದ್ದುಪುಡಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಯುವಜನೋತ್ಸವ ಹಲವು ವಿಶೇಷಗಳಿಂದ ಕೂಡಿತ್ತು. ಹೊಸ ಉತ್ಸಾಹ, ಪ್ರತಿಭಾ ಪ್ರದರ್ಶನದ ಹಿಗ್ಗಿನ ನಡುವೆ ರಾಜ್ಯದ ವಿವಿಧ ಜಿಲ್ಲೆಗಳ ಬಾಲಕಿಯರು ನವ ಮೆರಗು ತಂದರು. ವಿಶೇಷವಾಗಿ ಆ ಕಾಲೇಜಿನ ವಿದ್ಯಾರ್ಥಿನಿಯರ ನೃತ್ಯ ಎಲ್ಲರ ಗಮನ ಸೆಳೆಯಿತು.
 ರಂಗೋಲಿ ಸ್ಫರ್ಧೆ, ಭಾವಗೀತೆ, ಭಾಷಣ, ಕ್ವಿಜ್, ಫೋಟೋಗ್ರಫಿ ಹತ್ತು ಹಲವು ಸ್ಪರ್ಧೆಗಳಲ್ಲಿ ತಮ್ಮ ಚಾಣಾಕ್ಷತೆಯನ್ನು ಒರೆಗಲ್ಲಿಗೆ ಹಚ್ಚಿದರು. ಬೆಂಗಳೂರು, ಬೀದರ್, ತುಮಕೂರು, ಕೂಡ್ಲಿಗಿ, ಹಡಗಲಿ, ಚಿಕ್ಕಮಗಳೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 300ಕ್ಕೂ ಸ್ವಯಂ ಸೇವಕಿಯರು ಆಗಮಿಸಿದ್ದರು. ಸ್ವಯಂ ಸೇವಕಿಯರು ತಮ್ಮ ಪ್ರತಿಭಾ ಪ್ರದರ್ಶನದ ಮೂಲಕ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಇತರರ ಗಮನ ಸೆಳೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement