ಪತ್ರಿಕೆಗಳು ಸಾಮಾನ್ಯರ ಧ್ವನಿಯಾಗಲಿ: ಕಂಬಳಿ
ಕನ್ನಡಪ್ರಭ ವಾರ್ತೆ, ಸಿಂಧನೂರು, ನ.5
ಪತ್ರಿಕೆಗಳು ಸಾಮಾನ್ಯರ ಧ್ವನಿಯಾಗಿ ಸತ್ಯವನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕೆಂದು ಪತ್ರಕರ್ತ ಡಿ.ಹೆಚ್. ಕಂಬಳಿ ಹೇಳಿದರು.
ನಗರದ ಸುಕಾಲಪೇಟೆ ರಸ್ತೆಯಲ್ಲಿರುವ ದುನಿಯಾ ರಾಯಚೂರು ಪಾಕ್ಷಿಕ ಪತ್ರಿಕೆಯ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದರು. ಪತ್ರಿಕೆಗಳು ಜನರ ಸಮಸ್ಯೆಗಳನ್ನು ಯಾವ ಜನಪ್ರತಿನಿಧಿ ಹಾಗೂ ಪಕ್ಷಗಳ ಮುಲಾಜಿಗೆ ಬೀಳದೆ ನಿರ್ಭೀತಿಯಾಗಿ ಸುದ್ದಿಯನ್ನು ನೀಡಬೇಕು. ಆಗ ಮಾತ್ರ ಪತ್ರಿಕೆಗಳು ಜನ- ಮಾನಸದಲ್ಲಿ ಉಳಿದು ಪತ್ರಿಕೆಯ ಮೌಲ್ಯಗಳನ್ನು ಉಳಿಸಕೊಳ್ಳಲು ಸಾಧ್ಯ ಎಂದು ಹೇಳಿದರು.
ನಂತರ ಮಾತನಾಡಿದ ಕನಕನಗರ ಸಿಆರ್ಪಿ ವೀರೇಶ ಗೋನವಾರ ಮಾತನಾಡಿ, ಪತ್ರಿಕೆಗಳು ಜನರ ಕೂಗಾಗಬೇಕು. ಆಗ ಮಾತ್ರ ಪತ್ರಿಕೆಗೆ ಹಾಗೂ ಪತ್ರಕರ್ತರಿಗೆ ಗೌರವ ಹೆಚ್ಚುತ್ತದೆ ಎಂದರು.
ದುನಿಯಾ ರಾಯಚೂರು ಪತ್ರಿಕೆಯ ಸಂಪಾದಕ ಕೆ. ನಾಗರಾಜ ಮಾತನಾಡಿ, ಪತ್ರಿಕೆ ಉದ್ಘಾಟನೆಯಾಗಿದ್ದು, ನಿರಂತರವಾಗಿ ಓದುಗರ ಕೈಗಿಡಲು ಎಲ್ಲರ ಸಲಹೆ, ಸಹಾಯ, ಸಹಕಾರ ಅಗತ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಐಟಿಯುಸಿ ತಾಲೂಕಾಧ್ಯಕ್ಷ ವೆಂಕನಗೌಡ ಗದ್ರಟಗಿ, ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಹ್ಲಾದಗುಡಿ, ಕೆ. ಶರಣಪ್ಪ ಗೋನಾಳ, ಎಂ.ಎಸ್. ಮುಸ್ತಾಫಾ, ಬಸವರಾಜ ಹಳ್ಳಿ, ಶೇಖರ ಯರದಿಹಾಳ, ಇಮಾಮ್ ಎತ್ಮಾರಿ, ಕೆ.ಬಾಳಪ್ಪ ಶಿಕ್ಷಕರು, ಅವಿನಾಶ ದೇಶಪಾಂಡೆ, ಅಜರ್ಖಾನ್, ನಾಗರಾಜ ಕಾರ್ಬನ್ ಕೇರ್, ಮುತ್ತಣ್ಣ ಜವಳಗೇರಾ, ಶ್ರೀ ಷಾ ಮೆಲೋಡೀಸ್ನ ಅಲ್ಲಾಭಕ್ಷಿ, ಕೆಎಂಎಫ್ ಬಸವರಾಜ ದಢೇಸೂಗುರು, ವೆಂಕಟೇಶ, ಮಂಜುನಾಥ ಕಣ್ಣೂರು ಸೇರಿದಂತೆ ಅನೇಕರು ಇದ್ದರು.