ಮೊಸಳೆ ಕೊಂದ ಗ್ರಾಮಸ್ಥರು
ಮುದಗಲ್: ಸಮೀಪದ ಕಿಲ್ಲಾರಹಟ್ಟಿ ಗ್ರಾಮದಲ್ಲಿ ಮೊಸಳೆ ಕಾಣಿಸಿದ್ದು, ಭೀತಿಗೊಳಗಾದ ಗ್ರಾಮಸ್ಥರು ಮೊಸಳೆಯನ್ನು ಕೊಂದು ಹಾಕಿರುವ ಘಟನೆ ಸೋಮವಾರ ರಾತ್ರಿ ಜರುಗಿದೆ.
ಈ ಹೆಣ್ಣು ಮೊಸಳೆ ಸುಮಾರು 9 ಅಡಿ ಉದ್ದವಿದ್ದು ಒಂದು ಕ್ವಿಂಟಾಲ್ ಭಾರವಿದೆ. ಅಲ್ಲದೇ, ಅದರ ವಯಸ್ಸು ಎರಡು ವರ್ಷ ಎಂದು ಅಂದಾಜಿಸಲಾಗಿದೆ. ಸೋಮವಾರ ರಾತ್ರಿ ನೀರಿನ ಟ್ಯಾಂಕ್ ಹತ್ತಿರ ಮೊಸಳೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ, ಭಯಭೀತರಾದ ಗ್ರಾಮಸ್ಥರು ಎಲ್ಲರು ಸೇರಿ ಆತ್ಮರಕ್ಷಣೆಗಾಗಿ ಮೊಸಳೆಯನ್ನು ಕಲ್ಲು, ಕೊಡಲಿ, ಮಚ್ಚಿನಿಂದ ಹೊಡೆದು ಸಾಯಿಸಲಾಗಿದೆ.
ಸ್ಥಳಿಕ್ಕೆ ಆಗಮಿಸಿದ ಲಿಂಗಸಗೂರು ವಲಯ ಅರಣ್ಯ ಅಧಿಕಾರಿ ಎಸ್.ಎಮ್. ಪ್ರಭಾಕರ, ಪಶು ವೈದ್ಯ ಬೇಗ್, ಮುದಗಲ್ಲ ಠಾಣೆಯ ಎ.ಎಸ್.ಐ ಎಂ. ಈರಣ್ಣ, ರೇಂಜೆರ್ ಖಾಜಾಹುಸೇನ ಸಾವಿಗಿಡಾದ ಮೊಸಳೆಯನ್ನು ಪರಿಶೀಲಿಸಿ ಅಂತ್ಯಸಂಸ್ಕಾರ ಮಾಡಿದರು. ಈ ಕುರಿತು ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.