ಯುವಕರು ವಿವೇಕಾನಂದರ ಆದರ್ಶ ಪಾಲಿಸಿ: ಮಹಿಬೂಬ್
ಲಿಂಗಸ್ಗೂರು: ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿ ಯುವ ಜನಾಂಗ ಮತ್ತು ಸಂಘ- ಸಂಸ್ಥೆಗಳಿಂದ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಸ್ವಾಮಿ ವಿವೇಕಾನಂದರ ಆದರ್ಶ ಪಾಲನೆ ಮಾಡಬೇಕೆಂದು ವಂದೇ ಮಾತರಂ ಯುವಕ ಸಂಘದ ಅಧ್ಯಕ್ಷ ಮಹಿಬೂಬ್ ಕರೆ ನೀಡಿದರು.
ಪಟ್ಟಣದ ಸಂಗಮೇಶ್ವರ ಪದವಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನೆಹರು ಯುವ ಕೇಂದ್ರ ರಾಯಚೂರು, ವಂದೇ ಮಾತರಂ ಯುವಕ ಸಂಘ ಮದ್ಲಾಪೂರ, ಅಮರ್ ಗ್ರಾಮೀಣ ಸಂಸ್ಕೃತಿ ಶಿಕ್ಷಣ ಹಾಗೂ ಕ್ರೀಡಾಭಿವೃದ್ಧಿ ಸಂಘ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಯುವ ಸಂಘಗಳ ಸಶಸ್ತ್ರೀಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಘ- ಸಂಸ್ಥೆಗಳ ಸ್ಥಾಪನೆ ಅಗತ್ಯವಾಗಿದೆ ಎಂದರು.
ಕಾಲೇಜು ಉಪನ್ಯಾಸಕ ಅನಿಲ್ ಕುಮಾರ್ ಅವರು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಬಸವರಾಜ ಖೈರವಾಡಗಿ, ಗದ್ದೆಪ್ಪ ಈಚನಾಳ, ದುರ್ಗಾಸಿಂಗ್, ವಿವಿಧ ಸಂಘಗಳ ಕಾರ್ಯಕರ್ತರಾದ ಅರುಣಣ್ಕುಮಾರ, ಪರಶುರಾಮ್, ವಿಶ್ವನಾಥ, ರವಿಕುಮಾರ ಸಾಲಮನಿ ಸೇರಿದಂತೆ ಇದ್ದರು.
--