ಇಂದು ಆಯುಷ್ ತಪಾಸಣೆ ಶಿಬಿರ
ರಾಯಚೂರು: ಜಿಲ್ಲಾ ಸರ್ಕಾರಿ ಆಯುರ್ವೇದ ಮತ್ತು ಯುನಾನಿ ಆಸ್ಪತ್ರೆಯಲ್ಲಿ ನ.7ರಂದು ಉಚಿತ ಆಯುಷ್ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ಶಿಬಿರದಲ್ಲಿ ತಜ್ಞ ವೈದ್ಯರು ರೋಗಿಗಳ ಆರೋಗ್ಯದ ತಪಾಸಣೆ ನಡೆಸಲಿದ್ದು, ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆಯಲು ಜಿಲ್ಲಾ ಆಯುಷ್ ಅಧಿಕಾರಿ ಡಾ. ಜೀಡಿ ಅಮರಗುಂಡಪ್ಪ ಕೋರಿದ್ದಾರೆ.
ಅಪರಿಚಿತ ವೃದ್ಧ ಸಾವು
ಗುಲ್ಬರ್ಗ: ನಗರದ ಹಳೆಯ ಎಸ್ಪಿ ಕಚೇರಿ ರಸ್ತೆಯ ಕುಳಗೇರಿ ಕ್ರಾಸ್ ಬಳಿ 65-70 ವರ್ಷದ ಅಪರಿಚಿತ ವಯೋವೃದ್ಧನ ಶವ ಪತ್ತೆಯಾಗಿದೆ. ಶವದ ಎಡಗಾಲ ಪಾದ ಪೂರ್ತಿಯಾಗಿ ಕೊಳೆತಿದೆ. ಬಲ ಕಾಲಿನ ಪಾದದ ಮೇಲೆ ಕೂಡ ಹಳೆಯ ಗಾಯಗಳು ಇವೆ. ಶವದ ಮೈಮೇಲೆ ಒಂದು ಬಿಳಿ ಬಣ್ಣದ ಗೆರೆಯುಳ್ಳ ಶರ್ಟ್, ಬಿಳಿ ಬಣ್ಣದ ಧೋತರವಿದೆ. ಯಾವುದೋ ಕಾಯಿಲೆಯಿಂದ ಮರಣ ಹೊಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.