ಗ್ರಾಹಕರಿಗೆ ಶೀಘ್ರದಲ್ಲಿ ಎಟಿಎಂ ಸೌಲಭ್ಯ: ನಾಯಕ
ಸಿಂಧನೂರು: ತಾಲೂಕಿನ ಬಳಗಾನೂರು ಗ್ರಾಮದ ಗ್ರಾಹಕರ ಅನೂಕೂಲಕ್ಕಾಗಿ ಶೀಘ್ರದಲ್ಲಿ ಎಸ್ಬಿಎಚ್ ಬ್ಯಾಂಕಿನ ಎಟಿಎಂ ಸೌಲಭ್ಯ ಒದಗಿಸಲಾಗುವುದು ಎಂದು ಎಸ್ಬಿಎಚ್ ಶಾಖಾ ವ್ಯವಸ್ಥಾಪಕ ವಾಸುದೇವ್ ನಾಯಕ ಹೇಳಿದರು.
ಗ್ರಾಮದ ಎಸ್ಬಿಎಚ್ ಎಟಿಎಂ ಕೇಂದ್ರ ಕಟ್ಟಡ ನಿರ್ಮಿಸಲು ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಹಕರ ಬಹುದಿನದ ಕನಸು ತಿಂಗಳಲ್ಲಿ ಈಡೇರಲಿದೆ. ಭಾಗಶಃ ಗ್ರಾಹಕರು ಎಟಿಎಂ ಹೊಂದಿದ್ದು ಗ್ರಾಹಕರಿಗೆ ಮತ್ತು ಬ್ಯಾಂಕಿಗೆ ತುಂಬ ಅನೂಕೂಲ ಎಂದರು.
ಸ್ಥಳದ ಮಾಲೀಕ ಗೋವಿಂದರೆಡ್ಡಿಗೌಡ ಗದ್ದಿ ಮಾತನಾಡಿ, ಗ್ರಾಮಸ್ಥರ ಅನೂಕೂಲಕ್ಕಾಗಿ ಕಟ್ಟಡ ಶೀಘ್ರದಲ್ಲಿ ನಿರ್ಮಿಸಿ ಎಸ್ಬಿಎಚ್ ಬ್ಯಾಂಕಿಗೆ ನೀಡುವುದಾಗಿ ತಿಳಿಸಿದರು.
ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ಯಂಕನಗೌಡ ಗದ್ದಿ ಭೂಮಿಪೂಜೆ ನೆರವೇರಿಸಿದರು. ಬ್ಯಾಂಕ್ನ ಪಿ.ಓ. ರಾವುಲ್, ಕ್ಯಾಷಿಯರ್ ಉದಯಕುಮಾರ, ಎಸ್ಡಿಎಂಗಳಾದ ರವಿಚಂದ್ರ, ಪ್ರಭಾಕರ, ಎಸ್.ಡಬ್ಲೂ. ಸತೀಶ್, ಶ್ರೀಶೈಲ ಗ್ರಾಮದ ಯುವ ಮುಖಂಡರಾದ ಅಮರೇಶ ಹೆಂಬಾ, ಹುಸೇನ್ ಬಾಷಾ, ಶರಣುಮರಡ್ಡಿ ಮತ್ತಿತರರು ಇದ್ದರು.