ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನ್ಯಾಯಬೆಲೆ ಅಂಗಡಿ ಉಳಿಸಲು ಗ್ರಾಮಸ್ಥರ ಮನವಿ

Lingaraj Badiger
Updated On : 7 Nov 2013, 11:22 am

ಕ.ಪ್ರ. ವಾರ್ತೆ, ಮುದಗಲ್, ನ.4
ಲಿಂಗಸ್ಗೂರು: ತಾಲೂಕಿನ ಸಜ್ಜಲಗುಡ್ಡ, ಕೋಮನೂರು ಗ್ರಾಮಗಳ ನ್ಯಾಯಬೆಲೆ ಅಂಗಡಿಯನ್ನು ಯಥಾಸ್ಥಿತಿ ಉಳಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ತಹಸೀಲ್ದಾರ್ ಜಿ.ಎಸ್. ಮಹಾಜನ್‌ರಿಗೆ ಬುಧವಾರ ಮನವಿ ಸಲ್ಲಿಸಿದರು.
  ಸಜ್ಜಲಗುಡ್ಡ ಗ್ರಾಮದ ಕೆಲವರು ಅ.30 ರಂದು ನ್ಯಾಯಬೆಲೆ ಅಂಗಡಿ ವ್ಯವಸ್ಥಾಪಕ ಅಮರಪ್ಪ ಮ್ಯಾಗೇರಿ ಅಂಗಡಿ ಸರಿಯಾಗಿ ನಡೆಸುತ್ತಿಲ್ಲ. ಕಾಳಸಂತೆಯಲ್ಲಿ ಪಡಿತರ ಮಾರಾಟ ಮಾಡುತ್ತಾರೆ. ತೂಕ ಮತ್ತು ಬೆಲೆಯಲ್ಲಿ ಮೋಸ ಮಾಡುತ್ತಾರೆಂದು ಆರೋಪಿಸಿ ದೂರು ಸಲ್ಲಿಸಿರುವುದು ಸತ್ಯಕ್ಕೆ ದೂರವಾಗಿದೆ. ಕಳೆದ ಸುಮಾರು 40 ವರ್ಷಗಳಿಂದ ಅಮರಪ್ಪ ಮ್ಯಾಗೇರಿ ನ್ಯಾಯಬೆಲೆ ಅಂಗಡಿಯನ್ನು ಯಾವುದೇ ಅಕ್ರಮ, ಅವ್ಯವಹಾರ ನಡೆಸದೆ ಸರಿಯಾದ ರೀತಿಯಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಕಾರಣ ಸಜ್ಜಲಗುಡ್ಡ, ಕೋಮನೂರು ಗ್ರಾಮಗಳ ನ್ಯಾಯಬೆಲೆ ಅಂಗಡಿ ಈಗಿರುವಂತೆ ಮುಂದುವರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
  ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ಡಿ.ಜಿ. ಗುರಿಕಾರ, ಮುಖಂಡರಾದ ಈರಪ್ಪ ಕೆಲವರ, ಬಾಲನಗೌಡ, ಯಮನಪ್ಪ ತಳವಾರ, ಆದಪ್ಪ ಇಲಕಲ್, ದೊಡ್ಡಪ್ಪ ರೇವಡಿಹಾಳ, ರಾಮಣ್ಣ ಕೆಲ್ಲೂರ, ಅಮಾತೆಪ್ಪ, ಮಹಾಂತೇಶ ಪಾಟೀಲ್ ಇತರರು ಇದ್ದರು.
ಕ್ರಮಕ್ಕೆ ಆಗ್ರಹ: ತಾಲೂಕಿನ ಸಜ್ಜಲಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳು ಎಸ್‌ಡಿಎಂಸಿ ಸದಸ್ಯರಿಗೆ ಕನ್ನಡ ರಾಜ್ಯೋತ್ಸವ ದಿನಾಚರಣೆ ಆಚರಿಸುವ ಕುರಿತು ನೋಟಿಸು ನೀಡಿರುವುದಿಲ್ಲ ಹಾಗೂ ಶಾಲಾ ಅನುದಾನ ಬಂದ ಬಗ್ಗೆ ಮಾಹಿತಿ ನೀಡುತ್ತಿಲ್ಲ.
  ಈಗಾಗಲೇ ಬಂದ 20 ಸಾವಿರ ಹಣ ಯಾವುದೇ ಕೆಲಸಕ್ಕೆ ಬಳಸುತ್ತಿಲ್ಲ. ಎಸ್‌ಡಿಎಂಸಿ ಸದಸ್ಯರಿಗೆ ಗೌರವ ನೀಡದೆ ಮಾತನಾಡುತ್ತಾರೆ. ಶಾಲೆಗೆ ಸಹ ಶಿಕ್ಷಕರು ಸರಿಯಾಗಿ ಬಾರದೆ ಇರುವ ಕುರಿತು ಕೇಳಿದರೆ ನೀವು ಯಾರೆಂದು ಪ್ರತಿವಾದ ಮಾಡುತ್ತಾರೆ. ಕೂಡಲೇ ಶಾಲಾ ಮುಖ್ಯಗುರುಗಳ ಮೇಲೆ ಸೂಕ್ತ ಕ್ರಮ ಜರುಗಿಸಲು ಒತ್ತಾಯಿಸಿ ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷ ರಾಮಪ್ಪ ಕೋಳೂರ, ಸದಸ್ಯರಾದ ಬಸವರಾಜ ಮಾಲಿ, ಬಸನಗೌಡ ರೇವಡಿಹಾಳ, ಶರಣಬಸಪ್ಪ ಅಂಗಡಿ, ಹನುಮಂತಪ್ಪ, ಶರಣಗೌಡ, ಸಂಗಪ್ಪ ಹವಾಲ್ದಾರ, ಹನುಮಂತ ಛಲವಾದಿ ಸೇರಿದಂತೆ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement