ರಾಜ್ಯ ಪರಿಷತ್ ಸದಸ್ಯ ಗುಂಡಪ್ಪಗೆ ಸನ್ಮಾನ
ಸಿಂಧನೂರು: ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ ನೇಮಕರಾದ ನಗರಸಭೆಯ ಕಂದಾಯ ಅಧಿಕಾರಿ ಗುಂಡಪ್ಪ ಸಾಲಗುಂದಾರನ್ನು ಪೌರಾಯುಕ್ತ ಸೈಯದ್ ನಾಸೀರ ಅಲಿ ಹಾಗೂ ಸಿಬ್ಬಂದಿ ಬುಧವಾರ ಆತ್ಮೀಯವಾಗಿ ಸನ್ಮಾನಿಸಿದರು.
ಪೌರಾಯುಕ್ತ ನಾಸೀರ ಅಲಿ ಮಾತನಾಡಿ, ನೌಕರರಲ್ಲಿ ಅನೇಕ ಸಮಸ್ಯೆಗಳಿದ್ದು ಅವುಗಳ ವಿರುದ್ಧ ಹೋರಾಟಕ್ಕೆ ಸಂಘಟನೆ ಅಗತ್ಯ. ನಮ್ಮವರು ರಾಜ್ಯ ಮಟ್ಟದ ಪದಾಧಿಕಾರಿಗಳಾಗಿದ್ದು, ನಮಗೆ ಅತೀವ ಸಂತೋಷ ತಂದಿದೆ. ನೌಕರರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಯೋಜನಾಧಿಕಾರಿ ದುರುಗಪ್ಪ ಹಸಮಕಲ್, ಕಂದಾಯ ನಿರೀಕ್ಷಕ ಮುನಿಸ್ವಾಮಿ ಹಾಗೂ ಸಿಬ್ಬಂದಿ ಹಾಜರಿದ್ದರು.