ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಮರ್ಪಣಾ ಸಂಸ್ಥೆಯಿಂದ ಹೊಲಿಗೆ ತರಬೇತಿ ಆರಂಭ

Lingaraj Badiger
Updated On : 7 Nov 2013, 11:27 am

ಸಿಂಧನೂರು: ಸಮರ್ಪಣಾ ಅಭಿವೃದ್ಧಿ ಸಂಸ್ಥೆ ಹಾಗೂ ಇನೋವಾ ಪೌಂಡೇಶನ್ ಸಹಯೋಗದೊಂದಿಗೆ ಅರಳಹಳ್ಳಿ ಗ್ರಾಮದಲ್ಲಿ ಹೊಲಿಗೆ ತರಬೇತಿ ಕೇಂದ್ರವನ್ನು ಆರಂಭ ಮಾಡಲಾಯಿತು.
  ಸಂಸ್ಥೆಯ ಕಾರ್ಯದರ್ಶಿ ರಾಮದಾಸ ಮಾತನಾಡಿ, ಈ ತರಬೇತಿಯು ಗ್ರಾಮೀಣ ಸಮುದಾಯದ ಸಹಕಾರದೊಂದಿಗೆ ಆರಂಭಗೊಂಡಿದೆ. ಸುಮಾರು 10 ವೃತ್ತಿಪರ ಕೇಂದ್ರಗಳನ್ನು ಆರಂಭಿಸಿ, ಒಂದು ಸಾವಿರ ಮಹಿಳೆಯರಿಗೆ ವಿವಿಧ ತರಬೇತಿಗಳನ್ನು ನೀಡಿ, ಸ್ವಾವಲಂಬಿಗಳಾಗಿ ಜೀವನ ನಡೆಸುವುದಕ್ಕೆ ಅನುಕೂಲ ಕಲ್ಪಿಸಿಕೊಡಲಾಗುತ್ತದೆ ಎಂದರು.
  ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗ್ರಾಪಂ ಸದಸ್ಯ ಪಂಪಾಪತಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ವೃತ್ತಿ ತರಬೇತಿ ಕಲಿಯಬೇಕಾದರೆ ಸುಮಾರು 8-10 ಕಿ.ಮೀ. ಕಾಲ್ನಡಿಗೆಯಲ್ಲಿ ಹೋಗಿ ಬರಬೇಕಾಗುತ್ತದೆ. ಆದರೆ ಸಮರ್ಪಣಾ ಸಂಸ್ಥೆಯವರು ಆಯೋಜಿಸಿರುವುದು ಉತ್ತಮ ಬೆಳವಣಿಗೆ. ಇದರ ಸದುಪಯೋಗ ಪಡೆಯಲು ವಿನಂತಿಸಿದರು.
  ಶಿವಪುತ್ರಪ್ಪ ವಕೀಲರು, ಸಾವಿತ್ರಿ ಹಿರೇಮಠ, ಬಸವರಾಜ ಕುಂಬಾರ ಮಾತನಾಡಿದರು. ವೇದಿಕೆಯ ಮೇಲೆ ಗಿರಿಯಪ್ಪ ಹೊಗರನಾಳ, ಸೂಗುರಪ್ಪ ಪೊ.ಪಾ ಮತ್ತಿತರಿದ್ದರು. ಅರಳಹಳ್ಳಿ ಗ್ರಾಪಂ ಸದಸ್ಯ ಶರಣಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಘನಮಠ ಶ್ರೀ ವಹಿಸಿದ್ದರು. ಮರಿಸ್ವಾಮಿ ನಿರೂಪಿಸಿ ಚಂದ್ರಶೇಖರ ಹಿರೇಮಠ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement