ಮನ ಸೆಳೆದ ಅಡ್ಡ ಪಲ್ಲಕ್ಕಿ ಮಹೋತ್ಸವ
ಕನ್ನಡಪ್ರಭ ವಾರ್ತೆ ಟಿ ಲಿಂಗಸ್ಗೂರು ಟಿ ನ.8
ಪಟ್ಟಣದ ವಿಜಯ ಮಹಾಂತೇಶ್ವರ ಶಾಖಾನುಭವ ಮಂಟಪದಲ್ಲಿ ನ.5 ರಿಂದ 7 ರವರೆಗೆ ನಡೆದ ಪರಮ ದಾಸೋಹಿ ಲಿಂ.ಚಿತ್ತರಗಿ ವಿಜಯ ಮಹಾಂತ ಶ್ರೀ 102ನೇ ಪುಣ್ಯ ಸ್ಮರಣೋತ್ಸವ, ಶರಣ ಸಂಸ್ಕೃತಿ ಮಹೋತ್ಸವ, ವಿಶ್ವ ಬಸವ ಧರ್ಮ ಸಮಾವೇಶ ಹಾಗೂ ಬಸವಾದಿ ಶರಣರ ತಡೋಲೆಯ ಪಲ್ಲಕ್ಕಿ ಉತ್ಸವ ಮತ್ತು ಸಾಮೂಹಿಕ ಕಲ್ಯಾಣ ಮಹೋತ್ಸವದ ಅಂಗವಾಗಿ ನಡೆದ ಗುರುವಾರ ವಚನ ಕಟ್ಟಿನ ಅಡ್ಡ ಪಲ್ಲಕ್ಕಿ ಮಹೋತ್ಸವ ಅದ್ಧೂರಿಯಾಗಿ ಜರುಗಿತು.
ಶ್ರೀಮಠದಿಂದ ಆರಂಭಗೊಂಡ ಅಡ್ಡಪಲ್ಲಕ್ಕಿ ಮಹೋತ್ಸವ ಬಸವಸಾಗರ ವೃತ್ತ, ಗಡಿಯಾರ ಚೌಕ್, ಬಸ್ ನಿಲ್ದಾಣ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸ್ಫೂರ್ತಿ ಮಹಿಳಾ ವೀರಗಾಸೆ ಕಲಾತಂಡ, ಧಾರವಾಡ ಜಿಲ್ಲೆಯ ಸೂಳ್ಯ ಗ್ರಾಮದ ಜಗ್ಗಲಗೆ ಕಲಾತಂಡ, ಪೂಜಾ ಕುಣಿತ, ಸುಮನ ಕುಣಿತ, ಉರುವೆ ತಂಡ, ಗಾರುಡಿ ಗೊಂಬೆ, ಬ್ಯಾಂಜೋ ತಂಡ, ಕಂಸಾಳೆ ನೃತ್ಯ, ಮಹಿಳಾ ಡೊಳ್ಳು ಕುಣಿತ ತಂಡಗಳ ಸಮೇತ ಅಡ್ಡ ಪಲ್ಲಕ್ಕಿ ಮಹೋತ್ಸವ ನಡೆಸಲಾಯಿತು.
ಮೆರವಣಿಗೆಯಲ್ಲಿ ಇಲಕಲ್ ಚತ್ತರಗಿ ಸಂಸ್ಥಾನ ಮಠದ ಡಾ. ವಿಜಯಮಹಾಂತ ಶ್ರೀ, ಬಸವಲಿಂಗ ಶ್ರೀ, ಸಿದ್ಧಲಿಂಗ ಶ್ರೀ, ಮಠದ ಸ್ವಾಗತ ಸಮಿತಿ ಅಧ್ಯಕ್ಷ ಶಿವಾನಂದ ಐದನಾಳ, ಉಪಾಧ್ಯಕ್ಷ ಭೂಪನಗೌಡ ಕರಡಕಲ್, ಕಾರ್ಯದರ್ಶಿ ವಿಶ್ವನಾಥ ಸಕ್ರಿ, ಅಕ್ಕನ ಬಳಗದ ಅಧ್ಯಕ್ಷೆ ಚೆನ್ನಮ್ಮ ಸಕ್ರಿ, ಅಮರವಾಣಿ ಐದನಾಳ, ಪ್ರೇಮಸಿಂಗ್ ಠಾಕೂರ್, ದೊಡ್ಡಪ್ಪ ಹೆಸರೂರು, ಬಸವರಾಜ, ಶರಣಪ್ಪ, ವೀರೇಶ ಸೇರಿದಂತೆ ಇನ್ನಿತರರು ಇದ್ದರು.