ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕೆಎಂಎಫ್‌ನಿಂದ ಅಕ್ರಮ ನೀರು ಬಳಕೆ: ಹಮಾಲರು, ರೈತರ ಮುತ್ತಿಗೆ

Vishwanath S
Updated On : 10 Nov 2013, 12:28 pm

ಮುದಗಲ್: ಸ್ಥಳೀಯ ಎಪಿಎಂಸಿ ಉಪ ಮಾರುಕಟ್ಟೆಯ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಅಕ್ರಮವಾಗಿ ಕೆಎಂಎಫ್‌ನವರು ಸಂಪರ್ಕ ಪಡೆದಿದ್ದಾರೆ ಎಂದು ಆರೋಪಿಸಿ ಮುದಗಲ್ ಮಾರುಕಟ್ಟೆಯಲ್ಲಿ ಎಸಿ ಟಿ.ಯೋಗೇಶ ಅವರಿಗೆ ಮಾರುಕಟ್ಟೆ ಹಮಾಲರು, ರೈತರು ಮುತ್ತಿಗೆ ಹಾಕಿದರು.
ಪಟ್ಟಣದ ಎಪಿಎಂಸಿಗೆ ಎಸಿ ಯವರು ಆಗಮಿಸುತ್ತಿದ್ದಂತೆ ರೈತ ಮುಖಂಡ ಅಮರಣ್ಣ ಗುಡಿಹಾಳ, ಹಮಾಲರು ಮುತ್ತಿಗೆ ಹಾಕಿದರೆ ನೀರಿನ ಸಮಸ್ಯೆ ಕುರಿತು ಸ್ಥಳೀಯ ವ್ಯಾಪಾರಸ್ಥರು ಕೂಡ ಎಸಿ ಗಮನ ಸೆಳೆಯುವಲ್ಲಿ ಮುಂದಾದರು.
ಎಸಿ ಯೋಗೇಶ ಅವರು, ಕೆಎಂಎಫ್ ಘಟಕಕ್ಕೆ ಭೇಟಿ ನೀಡಿ ಅಲ್ಲಿದ್ದ ಸಿಬ್ಬಂದಿ ಕರೆದು ಕೇಳಿದರೆ ನಾನು ಹೊಸಬನಾಗಿದ್ದೇನೆ ಸರ್ ನನಗೆ ಏನೂ ಗೊತ್ತಿಲ್ಲ. ಎಪಿಎಂಸಿ ಪೈಪಲೈನ್‌ಗೆ ಸಂಪರ್ಕವಿರುವದು ಮಾತ್ರ ಗೊತ್ತು ಎಂದು ಹೇಳಿ ನಮ್ಮ ಎಂಡಿ ಸಾಹೇಬರಿಗೆ ಮಾತನಾಡಿ ಎಂದು ಹೇಳಿದರು. ಎಸಿಯವರು ಸ್ವಲ್ಪ ಗರಂ ಆಗಿಯೇ ಅದು ನನ್ನ ಕೆಲಸವಲ್ಲ, ನೀವು ನಿಮ್ಮ ಎಂಡಿ ಅವರಿಗೆ ಮಾತನಾಡಿ, ಬಿಡಿ, ನನಗೆ ಗೊತ್ತಿಲ್ಲ. ನೀವು ಕೂಡಲೇ ಬೇರೆ ವ್ಯವಸ್ಥೆ ಮಾಡಿಕೊಳ್ಳಿ. ಶೀಘ್ರವೇ ಸಂಪರ್ಕವನ್ನು ಕಡಿತಗೊಳಿಸಿಕೊಳ್ಳಬೇಕೆಂದು ಎಚ್ಚರಿಕೆ ನೀಡಿದರು.
ಈ ಸಮಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಅಮರಣ್ಣ ಗುಡಿಹಾಳ, ಹಮಾಲರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ವ್ಯಾಪಾರಸ್ಥರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement