ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಂಕೇತ್ ಕಾಲೇಜಿಗೆ 3 ರ್ಯಾಂಕ್

Vishwanath S
Updated On : 10 Nov 2013, 12:28 pm

ಸಿಂಧನೂರು: ಗುಲ್ಬರ್ಗ ವಿಶ್ವವಿದ್ಯಾಲಯದ 2012-13ನೇ ಸಾಲಿನ ಬಿಕಾಂ ವಿಭಾಗದಲ್ಲಿ ಸಿಂಧನೂರಿನ ಸಂಕೇತ್ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ತಾಲೂಕಿನಲ್ಲಿ ಇದೇ ಪ್ರಥಮ ಬಾರಿಗೆ ಮೂರು ರ್ಯಾಂಕ್‌ಗಳನ್ನು ಪಡೆಯುವ ಮೂಲಕ ಹೊಸ ಮೈಲುಗಲ್ಲು ಸ್ಥಾಪಿಸಿದೆ.
ನಾಗಿಣಿ ಎನ್. ಸುಬ್ಬರಾವ್ ಶೇ.85.85 ಅಂಕ ಗಳಿಸಿ 2ನೇ ರ್ಯಾಂಕ್, ಸುಗ್ರಾ ತಬಸುಮ್ ಖಾಜಾ ಮೈನುದ್ದೀನ್ ಶೇ.85.34 ಅಂಕಗಳನ್ನು ಗಳಿಸಿ 5ನೇ ರ್ಯಾಂಕ್ ಹಾಗೂ ಶಿಲ್ಪಾ ದಿಲೀಪ್ ಕುಮಾರ ತಿವಾರಿ ಶೇ.84.59 ಅಂಕಗಳನ್ನು ಗಳಿಸಿ 7ನೇ ರ್ಯಾಂಕ್ ಪಡೆಯುವ ಮೂಲಕ ಕಾಲೇಜಿನ ಹಾಗೂ ತಾಲೂಕಿನ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಸಿಂಧನೂರು ತಾಲೂಕಿನ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಒಂದೇ ಕಾಲೇಜಿಗೆ ಮೂರು ರ್ಯಾಂಕ್‌ಗಳನ್ನು ಪಡೆದಿರುವುದು ಇದೇ ಪ್ರಥಮ ಬಾರಿಯಾಗಿದೆ.
ಅಭಿನಂದನೆ: ವಿಶ್ವವಿದ್ಯಾಲಯದ 10 ರ್ಯಾಂಕ್‌ಗಳಲ್ಲಿ 3 ರ್ಯಾಂಕ್‌ಗಳನ್ನು ಪಡೆದು ಹೊಸ ದಾಖಲೆ ಬರೆದ ನಾಗಿಣಿ, ಸುಗ್ರಾ ತಬಸುಮ್, ಶಿಲ್ಪಾ ತಿವಾರಿನ್ನು ಸಂಸ್ಥೆಯ ಅಧ್ಯಕ್ಷ ಎಸ್. ಬಸವರಾಜ, ಕಾರ್ಯದರ್ಶಿ ಅನಿಲ್‌ರಾಜ್, ಪ್ರಾಚಾರ್ಯ ಪ್ರಕಾಶ ಎಸ್.ಹೆಚ್. ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement