ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಮೋ ಬ್ರಿಗೇಡ್ ಅಭಿಯಾನ: ಬೈಕ್ ರ್ಯಾಲಿ

Lingaraj Badiger
Updated On : 11 Nov 2013, 11:27 am

ಕನ್ನಡಪ್ರಭವಾರ್ತೆ, ಲಿಂಗಸ್ಗೂರು, ನ.10
ನಮೋ ಬ್ರಿಗೇಡ್ ಅಭಿಯಾನ ನಿಮಿತ್ತ ಭಾನುವಾರ ಪಟ್ಟಣದ ಪ್ರಿಯಾಂಕ ಡಿ.ಇಡಿ. ಕಾಲೇಜು ಮೈದಾನದಿಂದ ಬಸವ ಸಾಗರ ವೃತ್ತ, ಬಸ್ ನಿಲ್ದಾಣ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಲಾಯಿತು.
ಯೋಗಗುರು ಮಾಸಿ ದೊರೈ ಬೈಕ್ ರ್ಯಾಲಿಗೆ ಚಾಲನೆ ನೀಡಿದರು.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನಮಂತ್ರಿಯನ್ನಾಗಿ ಮಾಡಬೇಕೆಂಬ ಸಂಕಲ್ಪದಿಂದ ನಮೋ ಬ್ರಿಗೇಡ್ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಬೈಕ್ ರ್ಯಾಲಿ ಮೂಲಕ ಜಾಗೃತಿ ಜಾಥಾ ನಡೆಸಲಾಯಿತು.
ನಂತರ ಪಟ್ಟಣದಲ್ಲಿ ನಮೋ ಬ್ರಿಗೇಡ್ ಕಾರ್ಯಾಲಯ ಉದ್ಘಾಟನೆ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಸಂಜೆ ಸಾರ್ವಜನಿಕ ಸಮಾರಂಭ ಏರ್ಪಡಿಸಲಾಗಿತ್ತು.
ರ್ಯಾಲಿಯಲ್ಲಿ ಮುಖಂಡರಾದ ಮಲ್ಲಪ್ಪ ಅಂಕುಶದೊಡ್ಡಿ, ಲಕ್ಷ್ಮೀಕಾಂತರೆಡ್ಡಿ ಮುನ್ನೂರ, ಶಿವಪ್ರಕಾಶ ಕುಂಬಾರ, ಸಿದ್ಧು ಬಡಿಗೇರ, ನಾಗಭೂಷಣ, ಮಲ್ಲಿಕಾರ್ಜುನ ಸಕ್ರಿ, ಶಶಿಕಾಂತ ಗಸ್ತಿ, ಪ್ರಭು ಗಸ್ತಿ, ರಾಜು ತಂಬಾಕೆ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement