ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

1,500 ಚೀಲ ಅಕ್ಕಿ ಅಕ್ರಮ ದಾಸ್ತಾನು ಪತ್ತೆ

Rashmi Kasaragodu
Updated On : 12 Nov 2013, 11:59 am

ಸಿಂಧನೂರು: ತಾಲೂಕಿನ ಗೊರೇಬಾಳ ಕ್ಯಾಂಪಿನ ಕೆ.ಎ. ಲಕ್ಷ್ಮಣರಾವ್ ವೀರಸ್ವಾಮಿ ಎಂಬುವವರಿಗೆ ಸೇರಿದ ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 1,500 ಚೀಲ ಅಕ್ಕಿಯನ್ನು ಭಾನುವಾರ ಜಪ್ತಿ ಮಾಡಿಕೊಳ್ಳಲಾಗಿದೆ.
ಆಹಾರ ಇಲಾಖೆಯ ಜಿಲ್ಲಾ ಅಧಿಕಾರಿ ಗುರುರಾಜ್ ಮತ್ತು ತಹಸೀಲ್ದಾರ್ ವೆಂಕನಗೌಡ ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಅನ್ನಭಾಗ್ಯ ಯೋಜನೆಯ ಪಡಿತರವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇತ್ತೀಚೆಗೆ ಶ್ರೀರಾಂಪುರಂ ಜಂಕ್ಷನ್ನ ರತ್ನಯ್ಯ ಎನ್ನುವವರ ಗೋದಾಮಿನ ಮೇಲೆ ದಾಳಿ ನಡೆಸಿದಾಗ 752 ಕ್ವಿಂಟಲ್ ಅಕ್ರಮ ದಾಸ್ತಾನು ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಸಿಂಧನೂರಿಗೆ ಆಗಮಿಸಿದ್ದ ಆಹಾರ ಇಲಾಖೆಯ ಗುರುರಾಜ್ ಅವರು ಖಚಿತ ಮಾಹಿತಿ ಆಧಾರದ ಮೇಲೆ ತಹಸೀಲ್ದಾರರೊಂದಿಗೆ ಲಕ್ಷ್ಮಣರಾವ್ ಅವರ ಗೋದಾಮಿನ ಮೇಲೆ ದಾಳಿ ನಡೆಸಿದಾಗ ಅಕ್ರಮವಾಗಿ ಶೇಖರಿಸಲಾಗಿದ್ದ ಅಕ್ಕಿ ದಾಸ್ತಾನು ಪತ್ತೆಯಾಗಿವೆ. ಕೂಡಲೇ ಗೋದಾಮಿಗೆ ಬೀಗ ಜಡಿದು ವಶಕ್ಕೆ ತೆಗೆದುಕೊಂಡರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement